ಬೀಜಾಡಿ: ಹಳೆ ವಿದ್ಯಾರ್ಥಿಗಳ ಸಮ್ಮಿಲನ ‘ರೂವಾರಿ’ ಸಮಾರೋಪ


ಬೀಜಾಡಿ: ಶಾಲೆಯ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಹಳೆ ವಿದ್ಯಾರ್ಥಿ ಸಂಘ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವ ನಿಟ್ಟಿನಲ್ಲಿ ‘ರೂವಾರಿ’ ಭಾವ ನೆನಪುಗಳ ಸಂಗಮ ಕಾರ್ಯಕ್ರಮ ಸಂಘಟಿಸಿರುವುದು ಒಳ್ಳೆಯ ಬೆಳವಣೆಗೆ. ಇದು ಮುಂದಿನ ದಿನದಲ್ಲಿ ಶಾಲೆಯ ಅಭಿವೃದ್ದಿಗೆ ಸಹಾಯವಾಗಲಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಕೃಷ್ಣಮೂರ್ತಿ ಪಿ.ಕೆ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ‘ರೂವಾರಿ-2023’ ಭಾವ-ನೆನಪುಗಳ ಸಂಗಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪದ ಮಾತುಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್‍ಕುಮಾರ್ ಬಿ.ಆರ್ ವಹಿಸಿದ್ದರು.
ಉದ್ಯಮಿ,ದಾನಿ ವಿಶ್ವನಾಥ ಹೆಗ್ಡೆ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್., ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಪ್ರವೀಣಾ ಶೆಟ್ಟಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿಯ ಅಧ್ಯಕ್ಷ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಅಮೀನ್, ಕೋಶಾಧಿಕಾರಿ ನವೀನ್ ಕುಮಾರ್, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ನಂದಿನಿ ಫ್ರೆಂಡ್ಸ್‍ನ ಅಧ್ಯಕ್ಷ ಪ್ರಶಾಂತ್ ಗೋಳಿಬೆಟ್ಟು, ಬೆಳ್ಳಂಕಿ ಫ್ರೆಂಡ್ಸ್‍ನ ಅಧ್ಯಕ್ಷ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಗೀತಾ ಸ್ವಾಗತಿಸಿದರು. ವೀಣಾ ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಗಣೇಶ್ ಕಾಂಚನ್ ಸಹಕರಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ

” ಗಾಂಧೀಜಿಯವರು ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಮಾತ್ರವಲ್ಲದೇ, ದೇಶ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವುದರಲ್ಲಿಯೂ ಮುಂಚೂಣಿಯ ಪಾತ್ರವಹಿಸಿದ್ದರು. ಭಾರತದ ಸಂವಿಧಾನದಲ್ಲಿಯೂ ಅಳವಡಿಸಲಾದ ರಾಮರಾಜ್ಯದ ಪರಿಕಲ್ಪನೆ ಮತ್ತು ಸರಳತೆ, ಸ್ವಚ್ಚತೆಯೆಂಬ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಜನಜೀವನದಲ್ಲಿ ತಲುಪಿಸಿದವರೂ ಗಾಂಧೀಜಿಯವರು. ಹಾಗೆಯೇ ಗಾಂಧೀಜಿಯವರ ಶ್ರೇಷ್ಠ ತತ್ವ ಮತ್ತು ಮೌಲ್ಯಗಳನ್ನು ಅತ್ಯಂತ ಸಾರ್ಥಕ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ಕರೆ ನೀಡಿದರು. ಗಾಂಧಿ‌ ಮತ್ತು ಶಾಸ್ತ್ರಿ ಜಯಂತಿಯ ಅಂಗವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ‌ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.  ಕಾಲೇಜಿನ‌ ಎಲ್ಲ ಬೋದಕ- ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.  

ತಂದೆಗೆ ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ 2023 ಬಿರುದು,ಮಗಳಿಗೆ ಸ್ಟ್ರಾಂಗ್ ವಿಮೆನ್ ಆಫ್ ಕರ್ನಾಟಕ 2023 ಬಿರುದು

ಮಂಗಳೂರು : 29/09/2023 ರಿಂದ 01/10/2023 ರವರೆಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ ಜರುಗಿದ ರಾಜ್ಯ ಮಟ್ಟದ ಇಕ್ವಿಪ್ಪೇಡ್ ಮತ್ತು ಕ್ಲಾಸಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ 2023ರ ಲ್ಲಿ ಭಾಗವಹಿಸಿದ ಬಾಲoಜನೇಯ ಜಿಮ್ ಸದಸ್ಯರಾದ ಶ್ರೀ ವಿನ್ಸೆoಟ್ ಪ್ರಕಾಶ್ ಕಾರ್ಲೊ ಇವರು 83 ಕೆಜಿ ವಿಭಾಗ ದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದು ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ 2023 ಬಿರುದನ್ನು ಪಡೆದಿರುತ್ತಾರೆ.ಈ ಸ್ಪರ್ಧೆ ಯಲ್ಲಿ ಇವರ ಮಗಳಾದ ಕುಮಾರಿ ವೇನಿಝಿಯಾ ಕಾರ್ಲೊ 76 ಕೆಜಿ ಜೂನಿಯರ್ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುದಲ್ಲದೆ ಸ್ಟ್ರಾಂಗ್ ವಿಮೆನ್ ಆಫ್ ಕರ್ನಾಟಕ ಬಿರುದನ್ನು ಪಡೆದು ದ. ಕ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಹೋಲಿ ರಿಡೀಮರ್ ಶಾಲೆಯಲ್ಲಿ ಗಾಂಧೀಕಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಹೋಲಿ ರಿಡೀಮರ್ ಸ್ಕೂಲ್ ಅಕ್ಟೋಬರ್ 2 ರಂದು ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು
ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಆರಂಭವಾಯಿತು. ಪವಿತ್ರ ಗ್ರಂಥಗಳ ಓದುವಿಕೆ ಮತ್ತು ಭಜನೆಗಳನ್ನು ಹಾಡುವುದು ಕಾರ್ಯಕ್ರಮವನ್ನು ಅತ್ಯಂತ ಪ್ರಶಾಂತಗೊಳಿಸಿತು. ಮುಖ್ಯೋಪಾಧ್ಯಾಯರು, ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿ ನಾಯಕರಿಂದ ಮಹಾನ್ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
9ನೇ ತರಗತಿಯ ಮೊಹಮ್ಮದ್ ಶಮ್ಮಾಸ್ ಅವರು ಮಹಾತ್ಮ ಗಾಂಧೀಜಿ ಮತ್ತು 8ನೇ ತರಗತಿಯ ವಿಯೋಲಾ ಡಿಸೋಜಾ ಅವರು ಲಾಲ್ ಬಹದ್ದೂರ್ ಶಾಸ್ತ್ರೀಜಿ ಮತ್ತು ಅವರ ಸಾಧನೆಗಳ ಬಗ್ಗೆ ಸುಂದರವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ವಂದನೀಯ ಕ್ಲಿಫರ್ಡ್ ಪಿಂಟೋ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ದಿನವನ್ನು ಹೆಚ್ಚು ಅರ್ಥಪೂರ್ಣವಾಗಿಸಲು, ಶಾಲಾ ಆವರಣವನ್ನು ಸ್ವಚ್ಛಗೊಳಿಸಲು ಸ್ವಚ್ಛ ಭಾರತ್ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

10ನೇ ತರಗತಿಯ ಸಾನ್ವಿ ಸ್ವಾಗತಿಸಿದರು. ಕಾರ್ಯಕ್ರಮವನ್ನು 8 ನೇ ತರಗತಿಯ ತ್ರಿಷಾ ನಿರ್ವಹಿಸಿದರು. 7ನೇ ತರಗತಿಯ ರಿಷೆಲ್ ಡಿಸೋಜ ವಂದಿಸಿದರು. ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ದಿನವನ್ನು ಯಶಸ್ವಿಗೊಳಿಸಿದರು. ಫಲಾಹಾರ ಸವಿಯುವ ಮೂಲಕ ಆಚರಣೆ ಮುಕ್ತಾಯವಾಯಿತು.

ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಭೇಟಿ

ಶ್ರೀನಿವಾಸಪುರ ಪಟ್ಟಣದ ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ದುರಸ್ತಿ ಕಾಮಗಾರಿಗಳು ಹಾಗೂ ಶಾಲಾ ನಿರ್ವಹಣೆ ವೀಕ್ಷಣೆ ಮಾಡಿದರು.

ಶ್ರೀನಿವಾಸಪುರ : ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನ

ಶ್ರೀನಿವಾಸಪುರ 1 : ಸ್ವಚ್ಚ ಭಾರತ ಅಭಿಯಾನವು ಭಾರತವು ಸ್ವಚ್ಚ ಮತ್ತು ಉತ್ತಮವಾಗಲು ಸಾಧಿಸಲು ಸಾಕಷ್ಟು ಗುರಿಗಳನ್ನು ಹೊಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.
ಪಟ್ಟಣ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಚ ಭಾರತ ಅಭಿಯಾನವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಉಪಕ್ರಮವಾಗಿದೆ. ಏಕೆಂದರೆ ಕಳಪೆ ಶುಚಿತ್ವ ದಿಂದ ಪರಿಸರ ಹಾಗು ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರುವುದರಿಂದ ನಾವೆಲ್ಲರೂ ಸೇರಿ ಸ್ವಚ್ಚತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿರುವುದು ಮುಖ್ಯವಾಗಿದೆ.
ಈ ಹಿಂದೆ ಸ್ಚಚ್ಚತೆ ಹಾಗು ನೈರ್ಮಲ್ಯ ಇಲ್ಲದ ಕಾರಣ ಕಾಯಿಲೆಗಳಿಂದ ಲಕ್ಷಾಂತರ ಸಾವು ನೋವುಗಳ ವರಧಿಯಾಗಿದೆ. ಸಾರ್ವಜನಿಕರು ಸ್ವಚ್ಚತೆಯ ಅಗತ್ಯತೆ ಮತ್ತು ಅವರ ಆರೋಗ್ಯ ಮತ್ತು ಸಾಮಾಜಿಕ ಜೀವನದ ಮೇಲೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಮಹಾತ್ಮ ಗಾಂಧೀಜಿಯವರು ತಮ್ಮ ಕನಸಿನಂತೆ ಸ್ವಚ್ಚ ಭಾರತ್ ಮಿಷನ್ ಅನ್ನು ಪ್ರಾರಂಭಿಸಿದರು. ಮತ್ತು ಈ ಸಮಯದಲ್ಲಿ ಅವರು ತಮ್ಮ ಅಭಿಯಾನ ಮತ್ತು ಘೋಷಣೆಗಳ ಮೂಲಕ ಜನರನ್ನು ಪ್ರೇರೇಪಿಸುವ ಮೂಲಕ ಸ್ವಚ್ಚ ಭಾರತಕ್ಕಾಗಿ ಪ್ರಯತ್ನಿಸಿದರು. ಇಂದು ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಆರಂಭಿಸಿ ದೇಶಾದ್ಯಾಂತ ಜಾಗೃತಿ ಮೂಡಿಸಿ, ದೇಶಾದ್ಯಾಂತ ಸ್ವಚ್ಚತಾ ಅಭಿಯಾನಕ್ಕೆ ಕರೆ ನೀಡಲಾಗಿದೆ ಎಂದರು.
ಅಪರ ಸಿವಿಲ್ ನ್ಯಾಯದೀಶರಾದ ಹೆಚ್ .ಆರ್. ಸಚಿನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ, ಬಿಇಒ ಕೆ.ಭಾಗ್ಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್‍ಕುಮಾರ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯಾಧಿಕಾರಿ ಕೆ.ಜೆ.ರಮೇಶ್ ಇದ್ದರು.

ತೂಪಲ್ಲಿ ಹಾಲು ಉತ್ಪಾದಕರ ಸಂಘವು ಜೆಡಿಎಸ್ ವಶಕ್ಕೆ


ಶ್ರೀನಿವಾಸಪುರ 2 : ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ದಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಈ ಸಂಘಕ್ಕೆ ಸಂಬಂದಿಸಿದಂತೆ ನಿರ್ದೇಶಕರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಗಾಯತ್ರಿ ಮಾಹಿತಿ ನೀಡಿದರು.
ತೂಪಲ್ಲಿ ಗ್ರಾಮದ ಟಿ.ವಿ.ರಾಮರೆಡ್ಡಿ, ಟಿ.ವಿ.ಮಧುಸೂದನರೆಡ್ಡಿ, ಸಾವಿತ್ರಮ್ಮ, ಶ್ರೀನಿವಾಸರೆಡ್ಡಿ, ಗಂಗುಲಪ್ಪ, ಮದ್ದಮ್ಮ, ಟಿ.ಎ.ನಾಗರತ್ನಮ್ಮ, ಎಂ.ಕುರಪ್ಪಲ್ಲಿಯ ನರಸಿಂಹನಾಯ್ಡು, ಎಂ.ಕೆ.ವೆಂಕಟರಮಣನಾಯ್ಡು, ತಮ್ಮಿರೆಡ್ಡಿಗಾರಿಪಲ್ಲಿಯ ಮುನಿರತ್ನಮ್ಮ, ಶಂಕರಪ್ಪ, ಟಿ.ಎ.ನಾಗರತ್ನಮ್ಮ , ನರಸಿಂಹಪ್ಪ , ಶ್ರೀನಿವಾಸ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಟಿ.ಆರ್.ರಾಮಚಂದ್ರ ಇದ್ದರು.
ಚುನವಾಣೆಯಲ್ಲಿ ಆಯ್ಕೆಯಾಗಿ ನೂತನ ನಿರ್ದೇಶಕ ಟಿ.ವಿ.ಮಧುಸೂದನರೆಡ್ಡಿ ಮಾತನಾಡಿ ಹೈನುಗಾರಿಕೆಯು ಗ್ರಾಮೀಣ ಭಾಗದ ರೈತರಿಗೆ ವರಧಾನವಾಗಿದ್ದು, ಕೋಚಿಮುಲ್ ನಿಂದ ಸಿಗುವ ಸೌಲಭ್ಯಗಳನ್ನು ಪಡೆದು , ರೈತರು ಉತ್ತಮ ಗಣಮಟ್ಟದ ಹಾಲು ಡೈರಿಗೆ ಹಾಕಿ , ಡೈರಿಯನ್ನು ಉತ್ತಮ ರೀತಿಯಲ್ಲಿ ಬೆಳುಸುವಂತೆ ಮನವಿ ಮಾಡಿದರು.
ಚುನಾವಣೆಗೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿ
ಸಿದ್ದು, ಅದರಲ್ಲಿ 12 ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀನಿವಾಸಪುರ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಜಯಂತಿ

ಶ್ರೀನಿವಾಸಪುರ: ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಸರ್ವಕಾಲಿಕ ಮಾನವೀಯ ಮೌಲ್ಯವಾಗಿ ಮುಂದುವರಿದಿದೆ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸಾ ವಾತಾವರಣ ಮಾನವ ಕುಲಕ್ಕೆ ಬೆದರಿಕೆ ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ರಕ್ಷಣೆಯಲ್ಲಿ ಸೈನಿಕರು ಹಾಗೂ ರೈತರ ಪಾತ್ರ ಎತ್ತಿಹಿಡಿದ ಮಾಜಿ ಪ್ರಧಾನಿ ಹಾಗೂ ಸ್ವಾತಂತ್ರ್ಯ ಯೋಧ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ದೇಶ ವಾಸಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಚೇತನಗಳು ನಡೆದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಅವರ ತ್ಯಾಗ ಹಾಗೂ ಮಾನವೀಯ ಪ್ರಜ್ಞೆ ಸರ್ವಕಾಲಿಕ ಮಾದರಿಯಾಗಿದೆ. ಯುವ ಸಮುದಾಯ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ಶ್ರಮದಾನದ ಮಹತ್ವ ಅರಿಯಬೇಕು. ಶ್ರಮದಾನದ ಮೂಲಕ ಸ್ವಚ್ಛ ಪರಿಸರ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಕೆ.ಎಂ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಹರಿ, ಅನ್ವರ್ ಬೇಗ್, ನಾಗರಾಜ್ ಇದ್ದರು.

Br Baptist Rodrigues passes away at 79

Mangaluru : Br. Baptist Rodrigues of St. Joseph who, irrespective of age, religion, and gender, was affectionately called ‘Batti Brother’ has returned to the bosom of the Lord at the age of 79. He breathed his last at 1:00 p.m. (Oct 3, 2023) at KMC Hospital, Mangaluru.

He hails from St. Michael’s Parish, Bellore, belonging to the diocese of Mangalore. He was born to the late John Rodrigues and Cocess Rodrigues. They had seven children, and among them, two daughters found their religious calling in the congregation of Apostolic Carmel (AC).

Having been born on June 22, 1944, Br. Baptist joined the Carmelite Order in 1963 at Alwaye, Kerala. He made his first profession on March 19, 1969, in Podanur, Tamil Nadu, and his Solemn Profession in 1974. Throughout his life, he has rendered selfless and generous service, especially at Pushpashrama, Mysuru, St. Joseph’s Monastery, Mangaluru, Asha Deepa, Madanthyar, and Carmel Ashram, Koteshwar.

The funeral of Br. Baptist is scheduled to take place on Friday, October 6, 2023, at the Infant Jesus Shrine, Carmel Hill, Mangaluru, at 3:30 p.m. May his soul rest in peace.