

ಗಂಗೊಳ್ಳಿಃ ಡಿಸೆಂಬರ್ ೨೪ ರ ಸಂಜೆ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯಲ್ಲಿ, ಧರ್ಮಗುರು ವಂ।ತೋಮಸ್ ರೋಶನ್ ಡಿಸೋಜಾ ಇವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.















ಕುಂದಾಪುರ (ಡಿ.26): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ವೃತ್ತಿಯ ಕಡಗೆ ಮನಸ್ಸು ಮಾಡುತ್ತಾರೆ. ಆದರೆ ಇತರ ಕೆಲಸದ ಕಡೆಗೆ ಮನಸ್ಸು ಮಾಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮ, ದೇಶ ಭಕ್ತಿಯನ್ನು ಬೆಳೆಸಿಕೊಂಡರೆ ದೇಶ ಸೇವೆಯನ್ನು ಮಾಡುವ ಬೇರೆ ಬೇರೆ ಸರ್ಕಾರಿ ಕೆಲಸಗಳಿವೆ. ಅದರತ್ತ ಮನಸ್ಸು ಮಾಡಬೇಕು ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಶ್ರೀಯುತ ಪುನೀತ್ ಕುಮಾರ್ ಹೇಳಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ ಸಂಭ್ರಮದ ರುಗ್ಮಯಾನ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಜೀವನದ ಸವಿ ನೆನಪುಗಳನ್ನು ಬಿಚ್ಚಿಟ್ಟರು. ಸಂಸ್ಥೆಯ ಸಂಚಾಲಕರು ಹಾಗು ಅಧ್ಯಕ್ಷರು ಆಗಿರುವ ಶ್ರಿ ಬಿ ಎಂ ಸುಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಒಳ್ಳೆಯ ಶಿಕ್ಷಣವು ಮಕ್ಕಳಿಗೆ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಚರಿಸುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದು ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಎಚ್.ಎಮ್.ಎಮ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ ವಾರ್ಷಿಕ ವರದಿ ವಾಚಿಸಿದರು. ಕಳೆದ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಾದ ಶ್ರೀಧನ್ ಶೆಟ್ಟಿ, ಸುಜನ್ ಉಪಾಧ್ಯಾಯ, ಸಮೃದ್ಧಿ, ಕೌಶಿಕ್ ಶೆಟ್ಟಿ ಹಾಗೂ ಎನ್.ಸಿ.ಸಿ ಯಲ್ಲಿ ಸಾಧನೆ ಮಾಡಿದ ಅನ್ವಿತಾಳನ್ನು ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ ಕಲಾ ಶಿಕ್ಷಕರಾದ ರಮೇಶ್ ಹಾಂಡರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಕುಮಾರಿ ಪ್ರಾಪ್ತಿ ಮಡಪ್ಪಾಡಿ ಮತ್ತು ಸಮರ್ಥ ಕಾರ್ಯಕ್ರಮ ನಿರೂಪಿಸಿ ವಂದಸಿದರು.



ಕುಂದಾಪುರ; ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಮ್ ಬಿ ಎ ಮತ್ತು ಏಮ್ ಸಿ ಎ ವಿದ್ಯಾರ್ಥಿಗಳಿಗೆ ಒಂದು ವಾರದ ಓರಿಯೆಂಟೇಷನ್ ಮತ್ತು ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಎಂ. ಬಿ. ಎ ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯ ಅತಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಶಾಂತ್ ಕುಂದರ್ (ಮ್ಯಾನೇಜಿಂಗ್ ಪಾರ್ಟ್ನರ್ ಜನತಾ ಹೊಲ್ಡಿಂಗ್ಸ್ ) ನಾಯಕತ್ವ, ಮತ್ತು ವ್ಯವಹಾರದ ಹೊಸ ದೃಷ್ಠಿಕೋನ ಮತ್ತು ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಐ ಎಂ ಜೇ ಸಂಸ್ಥೆಗಳ ಬ್ರಾಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆಯವರು ಉನ್ನತ ವ್ಯಾಸಂಗದ ಉದ್ದೇಶ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೊ . ಅಮೃತ ಮಾಲಾ (ಪ್ಲೇಸ್ ಮೆಂಟ್ ಅಂಡ್ ಟ್ರೇನಿಂಗ್ ಡೀನ್ ) ಇವರು ವೃತ್ತಿ ಮಾರ್ಗದರ್ಶನ ದ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಂ ಸಿ ಏ ವಿಭಾಗ ಮುಖ್ಯಸ್ಥೆ ಡಾ. ನಂದಿನಿ ಯವರು ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಸಹಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ನೀಲ್ ಗ್ಲಾಡ್ವಿನ್ ವಂದಿಸಿದರು



ಕಲ್ಯಾಣಪುರದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಯು ಭವ್ಯವಾದ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ ಕಾರ್ಯಕ್ರಮವಾಗಿತ್ತು. ಸಂಜೆ 6:30 ರಿಂದ 7:00 ರವರೆಗೆ ಕ್ಯಾರೋಲ್ ಗಾಯನದ ಮೋಡಿಮಾಡುವ ಅಧಿವೇಶನದೊಂದಿಗೆ ಪ್ರಾರಂಭವಾಯಿತು, ಜೊವಿಟಾ ಫೆರ್ನಾಂಡಿಸ್ ಮತ್ತು ಅವರ ಸುಸಂಘಟಿತ ಗಾಯಕರ ತಂಡ. ಅವರ ಮಧುರ ಮತ್ತು ಸಾಮರಸ್ಯದ ಕ್ಯಾರೋಲ್ಗಳ ನಿರೂಪಣೆಯು ವಾತಾವರಣವನ್ನು ಸಂತೋಷ ಮತ್ತು ಗೌರವದಿಂದ ತುಂಬಿತು, ರಾತ್ರಿಯ ಸ್ವರವನ್ನು ಸಂಪೂರ್ಣವಾಗಿ ಹೊಂದಿಸುತ್ತದೆ.
ಅತ್ಯಾಕರ್ಷಕ ದೀಪಗಳು, ಕ್ರಿಸ್ಮಸ್ ಅಲಂಕಾರಗಳು, ನಕ್ಷತ್ರಗಳು ಮತ್ತು ಸುಂದರವಾಗಿ ರಚಿಸಲಾದ ಕೊಟ್ಟಿಗೆಗಳಿಂದ ಅಲಂಕರಿಸಲ್ಪಟ್ಟ ಚರ್ಚ್, ನೋಡುವುದಕ್ಕೆ ಒಂದು ದೃಶ್ಯವಾಗಿತ್ತು. ಅಲಂಕಾರಗಳ ಭವ್ಯತೆಯು ಪ್ರಶಾಂತವಾದ ಮತ್ತು ಹಬ್ಬದ ವಾತಾವರಣವನ್ನು ಸೃಷ್ಟಿಸಿತು, ಹಾಜರಿದ್ದ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸಿತು.
ಧರ್ಮಗುರು ಫಾ. ಪ್ರೀತಂ, ಪ್ರಾಂತೀಯ ಹೋಲಿ ಕ್ರಾಸ್ ಫಾದರ್ಸ್ ಮೈನರ್ ಸೆಮಿನರಿ, ಕಟಪಾಡಿ, ಮುಖ್ಯ ಸಂಚಾಲಕರಾಗಿ. ಅವರೊಂದಿಗೆ ಪ್ಯಾರಿಷ್ ಪ್ರೀಸ್ಟ್, ರೆ.ಡಾ. ರೋಕ್ ಡಿಸೋಜಾ, ಮತ್ತು ಸಹಾಯಕ ವಿಕಾರ್, ರೆ.ಫಾ. ಆಲಿವರ್ ನಜರೆತ್. ಚರ್ಚ್ ಭಕ್ತರಿಂದ ತುಂಬಿ ತುಳುಕಿತು, ಅಸಾಧಾರಣವಾಗಿ ದೊಡ್ಡ ಮತ್ತು ಉತ್ಸಾಹಭರಿತ ಸಭೆಯು ಸಂತೋಷದಾಯಕ ಸಂದರ್ಭವನ್ನು ಆಚರಿಸಲು ಜಮಾಯಿಸಿತು.
ಆಧ್ಯಾತ್ಮಿಕ ಆತ್ಮಾವಲೋಕನ ಮತ್ತು ಜವಾಬ್ದಾರಿಯ ವಿಷಯದ ಮೇಲೆ ಕೇಂದ್ರೀಕೃತವಾದ ಧರ್ಮೋಪದೇಶವು ವಿಶೇಷವಾಗಿ ಮನಸೆಳೆಯಿತು. ರೆ.ಫಾ. ಪ್ರೀತಮ್ ಬುಕ್ ಆಫ್ ಜೆನೆಸಿಸ್ನಿಂದ ಮೂರು ಆಳವಾದ ಪ್ರಶ್ನೆಗಳನ್ನು ಪ್ರತಿಬಿಂಬಿಸಿದರು: “ನೀವು ಎಲ್ಲಿದ್ದೀರಿ?” ಆಡಮ್ಗೆ, “ನಿನ್ನ ಸಹೋದರ ಎಲ್ಲಿದ್ದಾನೆ?” ಮತ್ತು “ನೀವು ಏನು ಮಾಡಿದ್ದೀರಿ?” ಕೇನ್ ಗೆ. ಅವರು ಈ ಪ್ರಶ್ನೆಗಳನ್ನು ಆಧುನಿಕ ಜೀವನಕ್ಕೆ ಕೌಶಲ್ಯದಿಂದ ವಿವರಿಸಿದರು, ದೇವರು, ಕುಟುಂಬ, ನೆರೆಹೊರೆಯವರು ಮತ್ತು ಪ್ರಕೃತಿಯೊಂದಿಗೆ ತಮ್ಮ ಸಂಬಂಧಗಳನ್ನು ಮೌಲ್ಯಮಾಪನ ಮಾಡಲು ನಿಷ್ಠಾವಂತರನ್ನು ಒತ್ತಾಯಿಸಿದರು. ನಮ್ಮ ಜೀವನದಲ್ಲಿ ಕ್ರಿಸ್ತನನ್ನು ಸಾಗಿಸುವ ಅಗತ್ಯವನ್ನು ಸಂದೇಶವು ಒತ್ತಿಹೇಳಿತು ಮತ್ತು ಪ್ರೀತಿ, ಸಹಾಯ ಮತ್ತು ಇತರರ ಕಾಳಜಿಯಲ್ಲಿ ಮಾದರಿಯಾಗಿದೆ.
ಯೂಕರಿಸ್ಟಿಕ್ ಆಚರಣೆಯ ನಂತರ, ರೆ.ಡಾ. ರೋಕ್ ಡಿಸೋಜಾ ಅವರು ತಮ್ಮ ಹೃತ್ಪೂರ್ವಕ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದರು ಮತ್ತು ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಕ್ರಿಸ್ಮಸ್ ಉತ್ಸಾಹದಿಂದ ತುಂಬಿದ ಪ್ಯಾರಿಷಿಯನ್ಗಳು ಪವಿತ್ರ ಮಾಸ್ನ ನಂತರ ಆತ್ಮೀಯವಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು, ಆಚರಣೆಗೆ ವೈಯಕ್ತಿಕ ಸ್ಪರ್ಶ ನೀಡಿದರು.
ಕೇಕ್ ವಿತರಣೆಯೊಂದಿಗೆ ಉತ್ಸವವು ಮುಂದುವರೆಯಿತು, ನಂತರ ಐಸಿವೈಎಂ ಮತ್ತು ವೈಸಿಎಸ್ ಗುಂಪುಗಳು ಆಯೋಜಿಸಿದ ಉತ್ಸಾಹಭರಿತ ಚಟುವಟಿಕೆಗಳು. ರೋಮಾಂಚಕವಾದ ಹೌಸಿ ಆಟವು ಉತ್ಸಾಹವನ್ನು ತಂದಿತು ಮತ್ತು ಸಾಂಟಾ ಕ್ಲಾಸ್ ತನ್ನ ಹರ್ಷಚಿತ್ತದಿಂದ ವರ್ತಿಸುವ ಮೂಲಕ ಮಕ್ಕಳು ಮತ್ತು ವಯಸ್ಕರನ್ನು ಸಂತೋಷಪಡಿಸಿದರು. ಸಂತೋಷದ ಆವೇಗವನ್ನು ಜೀವಂತವಾಗಿರಿಸುವ ವಿವಿಧ ಇತರ ಆಟಗಳನ್ನು ಸಹ ನಡೆಸಲಾಯಿತು.
ಆಧ್ಯಾತ್ಮಿಕ ಆಳ, ಹಬ್ಬದ ಅಲಂಕಾರಗಳು, ಸಂಗೀತದ ತೇಜಸ್ಸು ಮತ್ತು ಸಮುದಾಯದ ಒಗ್ಗಟ್ಟಿನ ತಡೆರಹಿತ ಮಿಶ್ರಣವು ಆಚರಣೆಯನ್ನು ನಿಜವಾಗಿಯೂ ಸ್ಮರಣೀಯವಾಗಿಸಿದೆ. ಮೌಂಟ್ ರೋಸರಿ ಚರ್ಚ್ ಮತ್ತೊಮ್ಮೆ ಕ್ರಿಸ್ಮಸ್-ನಂಬಿಕೆ, ಪ್ರೀತಿ ಮತ್ತು ಸಂತೋಷದ ನಿಜವಾದ ಸಾರವನ್ನು ಉದಾಹರಿಸಿತು.
Christmas Celebration at Mount Rosary Church, Santhekatte, Kallianpur

The Christmas celebration at Mount Rosary Church, Santhekatte, Kallianpur, was a grand and spiritually uplifting event. The evening began with an enchanting session of carol singing from 6:30 PM to 7:00 PM, led by Jovita Fernandes and her cohesive choir team. Their melodious and harmonious rendition of carols infused the atmosphere with joy and reverence, perfectly setting the tone for the night.
The church, adorned with stunning lighting, Christmas decorations, stars, and a beautifully crafted crib, was a sight to behold. The grandeur of the decorations created a serene and festive ambiance, enhancing the spiritual experience for everyone present.
The Eucharistic Celebration was the highlight of the evening, led by Rev. Fr. Preetam, Provincial of Holy Cross Fathers Minor Seminary, Katpadi, as the main celebrant. He was joined by the Parish Priest, Rev. Dr. Roque D’Souza, and Assistant Vicar, Rev. Fr. Oliver Nazareth. The church overflowed with devotees, an unusually large and enthusiastic congregation gathered to celebrate the joyous occasion.
The homily, centered on the theme of spiritual introspection and responsibility, was particularly moving. Rev. Fr. Preetam reflected on three profound questions from the Book of Genesis: “Where are you?” to Adam, “Where is your brother?” and “What have you done?” to Cain. He skillfully related these questions to modern life, urging the faithful to evaluate their relationships with God, family, neighbors, and nature. The message emphasized the need to carry Christ in our lives and be exemplary in love, helpfulness, and concern for others.
After the Eucharistic Celebration, Rev. Dr. Roque D’Souza conveyed his heartfelt Christmas greetings and extended gratitude to all who contributed to making the event a resounding success. The parishioners, filled with the Christmas spirit, exchanged greetings warmly after the Holy Mass, adding a personal touch to the celebrations.
The festivities continued with cake distribution, followed by lively activities organized by the ICYM and YCS groups. A thrilling Housie game brought excitement, and Santa Claus delighted the children and adults with his cheerful antics. Various other games were also conducted, keeping the joyous momentum alive.
The seamless blend of spiritual depth, festive decorations, musical brilliance, and community togetherness made the celebration truly memorable. Mount Rosary Church once again exemplified the true essence of Christmas—faith, love, and joy.
Reported by: P Archibald Furtado. Photographs by : Praveen Cuthino.



























































ಶ್ರೀನಿವಾಸಪುರ : ಪ್ರತಿ ಪಂಚಾಯಿತಿಗೊಂದು ರಾಗಿ ಹಾಗೂ ಭತ್ತ ಕಟಾವು ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಉಚಿತವಾಗಿ ನೀಡುವ ಜೊತೆಗೆ ಖಾಸಗಿ ಉಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ರಕ್ಷಣೆ ಮಾಡಬೇಕು ಪತ್ರಿಕಾ ಹೇಳಿಕೆ ಮುಖಾಂತರ ಕೃಷಿ ಅಧಿಕಾರಿಗಳನ್ನು ರೈತ ಸಂಘದಿಂದ ಕೃಷಿ. ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ರೈತ ಸಂಘದ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆದಿರುವ ರೈತರಿಗೆ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡು ಯಂತ್ರೋಪಕರಣಗಳು ಸಿಗದೆ ತೀವ್ರ ಸಂಕಷ್ಠಕ್ಕೆ ಸಿಲುಕಿದ್ದಾರೆ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಂತ್ರದಾರೆ ಯೋಜನೆಯನ್ನು ಸಮಪರ್ಕವಾಗಿ ನಿರ್ವಹಣೆ ಮಾಡದೇ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ . ಬೆಳೆ ಕಟಾವು ಮಾಡಲು ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗದೆ ವಿಧಿಯಿಲ್ಲದೆ ದುಪ್ಪಟ್ಟು ಹಣ ಪಾವತಿಸಿ ಖಾಸಗಿ ಯಂತ್ರೋಪಕರಣ ಕಡೆ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಖಾಸಗೀ ಕಟಾವು ಯಂತ್ರೋಪರಣಗಳ ಮಾಲೀಕರು ದುಪ್ಪಟ್ಟ ಬೆಲೆಯನ್ನು ಪ್ರತಿ ಎಕರೆಗೆ ಆರರಿಂದ ಹತ್ತು ಸಾವಿರ ವರೆಗೆ ನಿಗದಿ ಮಾಡಿ ರೈನ್ನು ಆರ್ಥಿಕ ಸಂಕಷ್ಟಕ್ಕೆ ಈಡಾಗುಂತೆ ಮಾಡಿದ್ದಾರೆ ಜಿಲ್ಲೆಗೆ ಈಗಾಗಲೇ ತಮಿಳುನಾಡು ಆಂದ್ರದಿಂದ ಕಟಾವು ಯಂತ್ರಗಳು ಕಾಲಿಟ್ಟಿದ್ದು ಪ್ರತಿ ಎಕರೆ ತಮಗೆ ಇಷ್ಟ ಬಂದ ರೀತಿ ಧರ ನಿಗದಿಮಾಡಿದ್ದು, ರೈತರನ್ನು ಶೋಷಣೆ ಮಾಡುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಲ್ಲೂಕಕ ಅಧ್ಯಕ್ಷ ತೆರ್ನಹಳ್ಳಿ.ಅಂಜಿನಪ್ಪ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕ್ರೋಡೀಕರಿಸಲು ಮುಂದಾಗಿರುವುದು ಬಿಟ್ಟರೆ ಕೃಷಿಯೇತರ ಚಟುವಟಿಕೆಗೆ ಅಂತಂತ್ರ ಪರಿಸ್ಥಿತಿ ಎದುರಿಸುತ್ತಿದೆ ರೈತರು ಬೆಳೆದಿರುವ ರಾಗಿ ಹಾಗೂ ಭತ್ತದ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡಿ ರಕ್ಷಣೆ ಮಾಡಿಕೊಳ್ಳಲು ಪರದಾಡುವ ಜೊತೆಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರಗಳು ಪರಾಡುವಂತಾಗಿದೆ ರೈತರಿಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರೋಪಕರಣಗಳನ್ನು ಉಚಿತವಾಗಿ ಇಲ್ಲದೆ ಸಬ್ಸಿಡಿ ರೂಪದಲ್ಲಿ ನೀಡುತ್ತಾರೆ ಎಂಬ ಆಶಾಭಾವನೆಯಿಂದ ಕಾದುಕುಳಿತಿದ್ದಾರೆ ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇತ್ತ ಗಮನ ಹರಿಸದೇ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಅಲವಟಿ ಶಿವು ರಾಜೇಂದ್ರಗೌಡ ಇದ್ದರು.


ಮಂಗಳೂರು;ಮಿಲಾಗ್ರೆಸ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೋನವೆಂಚರ್ ನಜರೆತ್ ಮುಖ್ಯ ಕಾರ್ಯದರ್ಶಿ, ಫಾ.ಮೈಕಲ್ ಸಾಂತ್ಮೇಯರ್ ಅವರು ಬೆಥ್ಲೆಹೆಮ್ನಲ್ಲಿ ಜನಿಸಿದ ಕ್ರಿಸ್ತನ ಜನನದ ಮಹತ್ವವನ್ನು ಮಾನವ ಜೀವನಕ್ಕೆ ವಿವರಿಸಿದರು. ಫಾ।ರಾಬಿನ್ ಸಾಂತುಮಾಯರ್,ಫಾ। ಉದಯ ಫರ್ನಾಂಡೀಸ್,ಫಾ। ಜೆರಾಲ್ಡ್ ಪಿಂಟೋ ಮೂರು ಸಾವಿರ ಜನಸಂದಣಿಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಜನರು ಸಂಭ್ರಮದಲ್ಲಿ ಪಾಲ್ಗೊಂಡರು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಕೇಕ್ ಕತ್ತರಿಸುವ ಮೂಲಕ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಕೇಕ್ ಹಾಗೂ ಜ್ಯೂಸ್ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Milagres Church Mangalore celebrated Christmas with fervor and enthusiasm.

Mangalore; The Parish Priest Fr Bonaventure Nazareth was the main celebrant,Fr Michael santhmayor preached on the occasion explaining the significance of the birth of Christ born in Bethlehem to human Life .Frs Robin Santhmayor, Udaya Fernandez, Gerald Pinto concelebrated at the Mass.Around three thousand people joined the celebration. The Joy and festal greetings were being shared by cutting the cake by the vice president and the secretary of the Parish Pastoral Parishad.cake and juice was shared among the people and they felicitated each other exchanging the greetings.












































ಕುಂದಾಪುರ, ಡಿ.25: 454 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ದಿವ್ಯ ಬಲಿಪೂಜೆಯನ್ನು ಅರ್ಪಿಸಿದ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ನಮಗೋಸ್ಕರ “ದೇವರು ಮನುಸ್ಯನಾಗಿದ್ದಾನೆ’ ದೇವರು ನಮನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಅವರು ತನ್ನ ಒಬ್ಬನೇ ಪುತ್ರ ಯೇಸುನನ್ನು ನಮಗೊಸ್ಕರ ಜಗತ್ತಿಗೆ ಅರ್ಪಿಸಿದರು, ಏಕೆಂದರೆ ದೇವರು ನಮ್ಮನ್ನು ಅಷ್ಟು ಪ್ರೀತಿಸುತ್ತಾರೆ, ದೇವರು ನಮ್ಮೆಲ್ಲರನ್ನು ಪ್ರೀತಿಸುತ್ತಾರೆ, ಯೇಸುವು ಅತೀ ಕೆಳಗಿನವರಿಗೆ ಮೇಲೆತ್ತಲು, ಪಾಪಿಗಳನ್ನು ಕ್ಶಮಿಸಿ ಪರಿರವರ್ತಿಸಲು ಬಂದವನು. ಈ ಪ್ರಪಂಚದಲ್ಲಿ ಹುಟ್ಟಿ ತನ್ನ ಪಿತನ ಪ್ರೀತಿಯನ್ನು ಮನುಜರಿಗೆ ಧಾರೆ ಎರೆದರು. ಯೇಸು ಅವರು ದೇವರ ಪ್ರೀತಿಯನ್ನು ಸಾರಿದರು. ಯೇಸುವನ್ನು ನಂಬಿ ಕೆಟ್ಟ ಜೀವನದಿಂದ ಪರಿವರ್ತನೆ ಹೊಂದಿ ಉತ್ತಮವಾದ ಜೀವನ ಸಾರಬೇಕು, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ, ಇಂದು ನಮ್ಮ ನಮ್ಮ ಹ್ರದಯಗಳಲ್ಲಿ ಯೇಸು ಹುಟ್ಟಬೇಕು, ನಾವು ಕನಿಷ್ಟರಿಗೆ ಸಹಾಯ, ಪರರಿಗೆ ಪ್ರೀತಿ ಪ್ರೇಮ ಕೊಟ್ಟರೆ, ಸಂಬಂಧಗಳನ್ನು ಉತ್ತಮ ಪಡಿಸಿಕೊಂಡಾಗ ನಮ್ಮ ಹ್ರದಯಗಳಲ್ಲಿ ದೇವರು ಹುಟ್ಟುತ್ತಾನೆ, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ’ ಎಂದು ತಿಳಿಸಿ, ಶುಭಾಷಯ ಕೋರಿ ವಂದಿಸಿದರು.
ದಾನಿಗಳ ಮೂಲಕ ಎಲ್ಲರಿಗೆ ಕೇಕ್ ಅನ್ನು ಎಲ್ಲರಿಗೆ ಹಂಚಲಾಯಿತು. ಬಲಿದಾನದ ಬಳಿಕ ಹೌಸಿ ಆಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.



























































































































ಮಂಗಳೂರುಃ ಸೇಂಟ್ ಆಗ್ನೆಸ್ ಪಿಯು ಕಾಲೇಜು ತನ್ನ ಕ್ರಿಸ್ಮಸ್ ಕಾರ್ಯಕ್ರಮ “ಫೆಸ್ಟಿವ್ ಎಕೋಸ್” ಅನ್ನು ಡಿಸೆಂಬರ್ 23 ರಂದು ಆಚರಿಸಿತು. ಸಭಾಂಗಣದಲ್ಲಿ ಆಯೋಜಿಸಲಾದ ಈ ಸಂದರ್ಭದಲ್ಲಿ ಋತುಮಾನದ ಹೊಳಪಿನ ವರ್ಣಗಳು ಗೋಚರಿಸಿದವು ಮತ್ತು ಬಹಳ ಸಂತೋಷ ಮತ್ತು ಸಂತೋಷದಿಂದ ತುಂಬಿದ್ದವು. ಯೇಸುವನ್ನು ಈ ಜಗತ್ತಿಗೆ ಕಳುಹಿಸುವ ಮೂಲಕ ಜಗತ್ತನ್ನು ಪಾಪದಿಂದ ರಕ್ಷಿಸಲು ದೇವರು ಮೇರಿಯೊಂದಿಗೆ ಪಾಲುದಾರಿಕೆ ಮಾಡಿದ ಆಕರ್ಷಕ ಕೋಷ್ಟಕವು ಕೇಂದ್ರಬಿಂದುವಾಗಿತ್ತು. ಈ ಸಹಸ್ರಮಾನದಲ್ಲಿ, ಯುದ್ಧ, ಅರಾಜಕತೆ ಮತ್ತು ಅವ್ಯವಸ್ಥೆಯಿಂದ ಛಿದ್ರವಾಗಿರುವ ಜಗತ್ತನ್ನು ಉಳಿಸಲು ದೇವರು ಯುವಕರೊಂದಿಗೆ ಹೇಗೆ ಪಾಲುದಾರರಾಗಲು ಬಯಸುತ್ತಾನೆ, ನಮ್ಮ ದಯೆ, ಪ್ರೀತಿ ಮತ್ತು ನಮ್ಮ ಹೃದಯದಲ್ಲಿ ಭರವಸೆ, ಸಂತೋಷ ಮತ್ತು ಶಾಂತಿಯನ್ನು ತರಲು ಬಯಸುತ್ತಾನೆ. ನಮ್ಮ ಸಹ ಜೀವಿಗಳಿಗೆ ಕರುಣೆ.
ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲೆಯ ಮಾಜಿ ಡಿಡಿಪಿಐ ಶ್ರೀಮತಿ ಫಿಲೋಮಿನಾ ಲೋಬೋ ಅವರು ಕ್ರಿಸ್ಮಸ್ನ ಉತ್ಸಾಹ ಮತ್ತು ಅದರ ಮಹತ್ವದ ಕುರಿತು ಆಳವಾದ ಸಂದೇಶ ನೀಡಿದರು. ಕ್ರಿಸ್ಮಸ್ ಕೇವಲ ಉಡುಗೊರೆಗಳ ಬಗ್ಗೆ ಅಲ್ಲ; ಇದು ಎಲ್ಲರಿಗೂ ಭರವಸೆ, ಸಂತೋಷ ಮತ್ತು ಸ್ಫೂರ್ತಿಯ ಕಾಲವಾಗಿದೆ ಎಂದು ಮುಖ್ಯ ಅತಿಥಿಗಳು ನೆನಪಿಸಿದರು. ಯುವಕರು ತಮ್ಮ ಅಪರಿಮಿತ ಶಕ್ತಿ ಮತ್ತು ಸೃಜನಶೀಲತೆಯಿಂದ ಜಗತ್ತಿನಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಬ್ಬದ ಋತುವಿನಲ್ಲಿ ಪ್ರತಿಬಿಂಬಿಸಲು ಅವಕಾಶವನ್ನು ಒದಗಿಸುತ್ತದೆ-ಒಳಗೆ ನೋಡಲು, ನಮ್ಮ ಉತ್ಸಾಹವನ್ನು ನವೀಕರಿಸಲು ಮತ್ತು ನಮ್ಮ ಗುರಿಗಳು ಮತ್ತು ಮೌಲ್ಯಗಳಿಗೆ ಮರುಕಳಿಸಲು.
ಚಾರಿಟಿ ಡ್ರೈವ್ ಈ ಸಂದರ್ಭದ ಪ್ರಮುಖ ಅಂಶವಾಗಿ ಕಾರ್ಯನಿರ್ವಹಿಸಿತು ಮತ್ತು ವಿದ್ಯಾರ್ಥಿಗಳು ತಮ್ಮ ಮೈಟ್ ಅನ್ನು ಪೂರ್ಣ ಹೃದಯದಿಂದ ಕೊಡುಗೆ ನೀಡಿದರು, ಪರೋಪಕಾರಿ ಮನೋಭಾವವನ್ನು ಹೆಚ್ಚಿಸಿದರು ಮತ್ತು ಸಾಮಾಜಿಕ ಸಂವೇದನೆಯನ್ನು ಪ್ರೋತ್ಸಾಹಿಸಿದರು.
ಕ್ರಿಸ್ಮಸ್ನ ಉತ್ಸಾಹದೊಂದಿಗೆ ಸಂಬಂಧಿಸಿದ ಭರವಸೆ ಮತ್ತು ಸಂತೋಷವನ್ನು ಹರಡಲು ಆಗ್ನೋ ಕ್ರಿಸ್ಮಸ್ ಕಾರ್ನಿವಲ್ ಅನ್ನು ಆಯೋಜಿಸಲಾಗಿದೆ. ಕಾರ್ನಿವಲ್ ಅದಮ್ಯ ಚೈತನ್ಯ ಮತ್ತು ಉಲ್ಲಾಸದಿಂದ ತುಂಬಿದ ಮೋಡಿಮಾಡುವ ವಾತಾವರಣವನ್ನು ನೀಡಿತು. ಉತ್ಸಾಹಿ ಭಾಗವಹಿಸುವವರು ಸಂಕೀರ್ಣವಾದ ಮೆಹೆಂದಿ ವಿನ್ಯಾಸಗಳು, ಸಂತೋಷಕರವಾದ ಬೇಯಿಸಿದ ಗುಡಿಗಳು, ಫೋಟೋ ಬೂತ್ ಮತ್ತು ಆಕರ್ಷಕ ಕ್ರಿಸ್ಮಸ್ ಅಲಂಕಾರಗಳನ್ನು ನೀಡುವ ವಿವಿಧ ಮಳಿಗೆಗಳನ್ನು ಅನ್ವೇಷಿಸಿದರು.
ಕ್ರಿಸ್ಮಸ್ ಮಾಲೆ ತಯಾರಿಕೆ ಮತ್ತು ಕ್ರಿಸ್ಮಸ್ ಮರಗಳಿಗೆ ಆಭರಣ ತಯಾರಿಕೆಯಂತಹ ಸ್ಪರ್ಧೆಗಳು ಭಾಗವಹಿಸುವವರ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡಿದ್ದರಿಂದ ಈವೆಂಟ್ ಶಕ್ತಿಯಿಂದ ಝೇಂಕರಿಸಿತು. ಬೋನ್ಹೋಮಿಗೆ ಸೇರಿಸುವ ವಿವಿಧ ಕೌಂಟರ್ಗಳಲ್ಲಿ ಆಟಗಳು ದಿನದಲ್ಲಿ ಲವಲವಿಕೆಯ ಅಂಶವನ್ನು ತಂದು ಎಲ್ಲರನ್ನು ಆಕರ್ಷಿಸಿದವು.
ಕಾರ್ನೀವಲ್ ಮನರಂಜನೆ, ಸೃಜನಶೀಲತೆ ಮತ್ತು ಸಮುದಾಯದ ಮನೋಭಾವದ ಸ್ಮೋರ್ಗಾಸ್ಬೋರ್ಡ್ ಆಗಿತ್ತು, ಪಾಲಿಸಬೇಕಾದ ನೆನಪುಗಳನ್ನು ಬಿಟ್ಟುಬಿಡುತ್ತದೆ. ಸಂಚಾಲಕರು, ಶ್ರೀಮತಿ ಲೊವಿನಾ ಅರಾನ್ಹಾ, ವಾಣಿಜ್ಯ ಉಪನ್ಯಾಸಕರು; ಶ್ರೀಮತಿ ಅನಿತಾ ಶೆಣೈ, ಹಿಂದಿ ಉಪನ್ಯಾಸಕರು; ಮತ್ತು ಅಂಕಿಅಂಶಗಳ ಉಪನ್ಯಾಸಕಿ ಶ್ರೀಮತಿ ಅನ್ಸಿಲ್ಲಾ ಅವರು ತಮ್ಮ ಸಮರ್ಪಿತ ಪ್ರಯತ್ನಗಳ ಮೂಲಕ ಕಾರ್ನೀವಲ್ನ ಯಶಸ್ಸನ್ನು ಖಚಿತಪಡಿಸಿದರು.
ಕ್ರಿಸ್ಮಸ್ ಕಾರ್ಯಕ್ರಮದ ಎಮ್ಸಿ ಅಸ್ತಾ ಡಿ’ಸೋಜಾ ಕಾರ್ಯಕ್ರಮವನ್ನು ಸುಗಮವಾಗಿ ಆಯೋಜಿಸಿದರು, ರೂಪಶ್ರೀ ಅವರು ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ನೆರೆದಿದ್ದ ಎಲ್ಲರ ಪರವಾಗಿ ಜಾನಿಸ್ ಕೃತಜ್ಞತೆ ಸಲ್ಲಿಸಿದರು. ಸನ್ನಿಧಿ, ಇಂಗ್ಲಿಷ್ ಉಪನ್ಯಾಸಕರು; ಶ್ರೀಮತಿ ಜ್ಯೋತಿ, ಅರ್ಥಶಾಸ್ತ್ರ ಉಪನ್ಯಾಸಕರು; Ms. ವೆನಿಸ್ಸಾ, ರಸಾಯನಶಾಸ್ತ್ರದ ಉಪನ್ಯಾಸಕಿ; ಮತ್ತು ಗಣಿತಶಾಸ್ತ್ರದ ಉಪನ್ಯಾಸಕರಾದ ಶ್ರೀಮತಿ ಬ್ಲೆಸ್ಸಿ ಅವರು ಸಂಯೋಜಕರಾಗಿ ಸೇವೆ ಸಲ್ಲಿಸಿದರು ಮತ್ತು ತಮ್ಮ ನಿಖರವಾದ ಯೋಜನೆ ಮತ್ತು ಅಭ್ಯಾಸದೊಂದಿಗೆ ಕ್ರಿಸ್ಮಸ್ ಕಾರ್ಯಕ್ರಮದ ಯಶಸ್ಸನ್ನು ಖಚಿತಪಡಿಸಿದರು. ಕ್ರಿಸ್ಮಸ್ ಆಚರಣೆಯು ಪ್ರೇಕ್ಷಕರ ಮೇಲೆ ನಿರಂತರ ಪ್ರಭಾವ ಬೀರಿತು, ಇದರಲ್ಲಿ ಪ್ರಾಂಶುಪಾಲರಾದ ಸೀನಿಯರ್ ನೋರಿನ್ ಡಿ’ಸೋಜಾ ಇದ್ದರು; ಉಪ ಪ್ರಾಂಶುಪಾಲರು, Sr. ಜಾನೆಟ್ ಸಿಕ್ವೇರಾ; ಸಿಬ್ಬಂದಿ; ಮತ್ತು ವಿದ್ಯಾರ್ಥಿಗಳು. ಅವರು ವಿನೋದ ಮತ್ತು ಈವೆಂಟ್ನ ಒಟ್ಟಾರೆ ಯಶಸ್ಸಿಗೆ ಅವಿಭಾಜ್ಯರಾಗಿದ್ದರು.
Christmas programme “Festive Echoes”, Charity Drive , The Agno Christmas Carnival

Mangalore; St Agnes PU College celebrated its Christmas programme “Festive Echoes” on 23 December. The resplendent hues of the season were visible on the occasion, which was held in the auditorium and was imbued with great joy and happiness. A charming tableau where God partnered with Mary to save the world from sin by sending Jesus into this world was the focal point. The tableau showcased how, in this millennium, God wants to partner with the youth to save a world that’s torn asunder by war, anarchy, and chaos by bringing hope, joy, and peace into our hearts through our acts of kindness, love, and mercy for our fellow beings.
The chief guest, Mrs. Philomena Lobo, former DDPI, DK district, delivered a profound message on the spirit of Christmas and its significance. Christmas is not just about gifts; it is a season of hope, joy, and inspiration for all, reminded the chief guest. Youth, with their boundless energy and creativity, have the potential to make a remarkable difference in the world. This festive season provides an opportunity for reflection—to look within, renew our spirits, and recommit to our goals and values.
The Charity Drive served as the highlight of the occasion and students wholeheartedly contributed their mite, enhancing the philanthropic spirit and encouraging social sensitivity.
The Agno Christmas Carnival was organised to spread the hope and joy associated with the spirit of Christmas. The Carnival offered an enchanting atmosphere filled with irrepressible vivacity and gaiety. Enthusiastic participants explored various stalls that offered intricate mehendi designs, delightful baked goodies, a photo booth, and charming Christmas décor.
The event buzzed with energy as competitions like Christmas wreath-making and ornament-making for Christmas trees engaged the creative talents of the participants. Adding to the bonhomie were the games at different counters that brought a playful element into the day and attracted everyone.
The carnival was a smorgasbord of entertainment, creativity, and community spirit, leaving behind cherished memories. The conveners, Mrs. Lovina Aranha, Lecturer in Commerce; Mrs. Anitha Shenoy, Lecturer in Hindi; and Mrs. Ancilla, Lecturer in Statistics, ensured the success of the carnival through their dedicated efforts.
The emcee for the Christmas programme, Asta D’Souza, orchestrated the event smoothly, Roopashree extended a warm welcome, and Janice expressed gratitude on behalf of everyone gathered. Sr. Sannidhi, Lecturer in English; Mrs. Jyothi, Lecturer in Economics; Ms. Venissa, Lecturer in Chemistry; and Ms. Blessy, Lecturer in Mathematics served as the coordinators and ensured the success of the Christmas programme with their meticulous planning and practice. The Christmas celebration left an enduring impression on the audience, who comprised the principal, Sr. Norine D’Souza; the vice principal, Sr. Janet Sequiera; the staff; and the students. They were also integral to the merriment and the event’s overall success.











































ಉಡುಪಿ, ಡಿ.24: ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಲೋಬೊ ಕ್ರಿಸ್ಮಸ್ ಶುಭಾಶಯಗಳನ್ನು ಬಿಷಪ್ ಜೆರಾಲ್ಡ್ ಅವರು, ಮಾಧ್ಯಮಕ್ಕೆ 2024 ರ ಕ್ರಿಸ್ಮಸ್ ಸಂದೇಶವನ್ನು ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ಪ್ರಭು ಮತ್ತು ರಕ್ಷಕ ಯೇಸುಕ್ರಿಸ್ತರ ಜನ್ಮದಿನವನ್ನು ನಾವು ಆಚರಿಸುತ್ತಿರುವಾಗ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಆತ್ಮೀಯ ಶುಭಾಶಯಗಳನ್ನು ತಿಳಿಸುತ್ತೇನೆ. ಕ್ರಿಸ್ಮಸ್ ಸಂತೋಷ, ಶಾಂತಿ ಮತ್ತು ಭರವಸೆಯ ಸಮಯವಾಗಿದೆ, ಬೆಥ್ ಲೆಹೆಮ್ನಲ್ಲಿ ಯೇಸುವಿನ ವಿನಮ್ರ ಜನನದ ಮೂಲಕ ದೇವರು ನಮಗೆ ತೋರಿಸಿದ ನಂಬಲಾಗದ ಪ್ರೀತಿಯನ್ನು ನಾವು ನೆನಪಿಸಿಕೊಳ್ಳುವ ಸಮಯ’ ಎಂದು ಜನತೆಗೆ ತಿಳಿಸಿ ಶುಭಾಶಯ ಕೋರಿದ್ದಾರೆ