ಗೌನಿಪಲ್ಲಿಯಲ್ಲಿ ಗುರುವಾರ ವಿವಿಧ ಬೇಡಿಕೆಗಳಿಗಾಗಿ ಗೌನಿಪಲ್ಲಿ ಗೆಳೆಯರ ಬಳಗದ ವತಿಯಿಂದ ಬಂದ್ ಹಮ್ಮಿಕೊಳ್ಳಾಗಿತ್ತು

ನಿವ್ರೃತ್ತ ಡೆಪ್ಯುಟಿ ತಹಶಿಲ್ದಾರ ಜಿ .ಗಣಪತಿ ಭಂಡಾರಿ ನಿಧನ

ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ : ಅಂತರಾಷ್ಟ್ರೀಯ ವೈದ್ಯರ ದಿನಾಚರಣೆ

ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆ ಗಂಗೊಳ್ಳಿ : ಶಿಕ್ಷಕ- ರಕ್ಷಕ ಸಂಘದ ಮಹಾಸಭೆ

ಗ್ರಾಮ ಪಂಚಾಯಿತಿ ನೌಕರರ ಬಾಕಿ ಇರುವ ವೇತನ ಪಾವತಿಗಾಗಿ ಮಾಡುವ ಬೃಹತ್ ಹೋರಾಟದಲ್ಲಿ ಎಲ್ಲಾ ನೌಕರರು ಭಾಗವಹಿಸಬೇಕು – ಪಾತಕೋಟ ನವೀನ್ ಕುಮಾರ್

ಕಲ್ಲೂರಿನ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯಲ್ಲಿ ಕೆ.ಆರ್.ರಮೇಶ್‍ಕುಮಾರ್ ಪಾಲ್ಗೊಂಡು ದೇವರ ದರ್ಶನ ಪಡೆದರು

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ರಾಸು ವಿಮಾ ಪರಿಹಾರವಿತರಣೆ

ಶ್ರೀನಿವಾಸಪುರ : ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು, ಮೃತಪಟ್ಟ ರಾಸುಗಳ ವಿಮಾ ಪರಿಹಾರ 07 ಚೆಕ್‍ಗಳು ಮೊತ್ತ 3,90,000/- ರೂಗಳ ಚೆಕ್‍ಗಳನ್ನು ಯಲ್ದೂರು ಕ್ಷೇತ್ರದ ನಿರ್ದೇಶಕ ಎನ್.ಹನುಮೇಶ್ ವಿತರಿಸಿದರು.
ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಸೋಮವಾರ ರಾಸು ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.
ಒಕ್ಕೂಟದ ಅಡ್ಡಗಲ್ ಕ್ಷೇತ್ರದ ನಿರ್ದೇಶಕರಾದ ಶ್ರೀ ಕೆ ಕೆ ಮಂಜುನಾಥ ರವರು ಮಾತನಾಡಿ, ಪ್ರಸ್ತುತ ವರ್ಷಕ್ಕೆ 2 ಬಾರಿ ರಾಸುವಿಮೆ ನೋಂದಣಿ ಮಾಡಲಾಗುತ್ತಿದ್ದು, ಇನ್ನು ಮುಂದೆ ವರ್ಷಕ್ಕೆ 3 ಬಾರಿ ರಾಸು ವಿಮೆ ನೋಂದಣಿ ಮಾಡಿಸಲು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಉಪ ವ್ಯವಸ್ಥಾಪಕರಾದ ಶ್ರೀ ಕೆ.ಎಂ.ಮುನಿರಾಜು ರವರು ಮಾತನಾಡಿ, ಪ್ರಸ್ತುತ ಒಕ್ಕೂಟದ ವತಿಯಿಂದ ಹಾಲಿನ ಧರವನ್ನು ಏರಿಕೆ ಮಾಡಲಾಗಿದ್ದು, ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಪ್ಯಾಟ್ ಮತ್ತು ಎಸ್.ಎನ್.ಎಫ್. ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ, ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತವೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಕೆ.ಎಂ.ಮುನಿಸ್ವಾಮಿರೆಡ್ಡಿ, ಎನ್ ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಅಣ್ಣಪ್ಪ ತಡಕೋಡ, ಗೋಪಾಲ ಕೃಷ್ಣ, ಕೆ.ಪಿ.ಶ್ವೇತ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು, ಫಲಾನುಭವಿಗಳು ಹಾಜರಿದ್ದರು.

ಕುಂದಾಪುರ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ – ಇಲ್ಲಿನ ಪತ್ರಕರ್ತರು ನಂಬಿಕೆಗೆ ಅರ್ಹರು – ಪತ್ರಕರ್ತರು ಮಾಧ್ಯಮ ಧರ್ಮ ಪಾಲಿಸ ಬೇಕು – ಉಡುಪಿ ಎಸ್ಪಿ ಹರಿರಾಂ ಶಂಕರ್

ಯಕ್ಷಗಾನದ ಕಾರ್ಮಿಕ ರಾಘವೇಂದ್ರ ಜೋಗಿಯವರ ಮನೆ ಮಳೆಯಿಂದ ಕುಸಿದಿದ್ದು- ಯಕ್ಷ ದ್ರುವ ಪಟ್ಲ ಪೌಂಡೇಶನ್ ಹೊಸ ಮನೆ ಕಟ್ಟಿಕೊಡಲು ಒಪ್ಪಿಗೆ