

ಕುಂದಾಪುರ; ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ,ಕುಂದಾಪುರದ ಮೆಟ್ರಿಕ್ ನಂತರದ ವಸತಿ ನಿಲಯ ಇಲ್ಲಿನ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳ ನಿವಾರಣೆ, ಮಾನಸಿಕ ಆರೋಗ್ಯದ ಕುರಿತು ಹಾಗೂ ನಶಾ ಮುಕ್ತ ಭಾರತದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಇಂದು ನಡೆಯಿತು .ಡಾ.ಪ್ರಿಯಾಂಕ ಜೋಗಿ ಇವರು ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಆರೋಗ್ಯ ಜಾಗೃತಿಯ ಕುರಿತು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಶಾಮುಕ್ತ ಭಾರತದ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರ ರಿವರ್ಸ್ ಸೈಡ್ ಇದರ ಅಧ್ಯಕ್ಷರಾದ ಸದಾನಂದ ಉಡುಪ ವಹಿಸಿದ್ದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ರಾಧಿಕಾ ರಾಣಿ ಇವರು ಪ್ರಾಸ್ತಾವಿಕ ಮಾತುಗಳ ನಾಡಿದರು . ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಸರ್ವರನ್ನು ಸ್ವಾಗತಿಸಿದರು. ಕ್ಲಬ್ಬಿನ ಕಾರ್ಯದರ್ಶಿ ಭಾಸ್ಕರ್ ಬಿ ಧನ್ಯವಾದ ಅರ್ಪಿಸಿದರು.
.





































































