

ಕುಂದಾಪುರ, ಜ. 18: “ ದೇವರು ತಮ್ಮ ಮಾತುಗಳಲ್ಲಿ, ಕ್ರತಿಯಲ್ಲಿ ನಾನು ಬಡವರ, ದೀನ ದಲಿತರ, ಅನ್ಯಾಯಕ್ಕೆ ಒಳಗಾದವರ ದೇವರು ನಾನೆಂದು, ಅವರನ್ನು ಹೆಚು ಪ್ರೀತಿಸುತ್ತೇನೆ ತಿಳಿಸುತ್ತಾನೆ ಅದರಂತೆ ನಾವೂ ಕೂಡ ಬಡವರ, ದೀನ ದಲಿತರ, ಅನ್ಯಾಯಕ್ಕೆ ಒಳಗಾದವರಿಗೆ ಆಸರೆಯಾಗಬೇಕು, ಆ ಮೂಲಕ ಅವರಿಗೆ ಒಳ್ಳೆಯ ಸುದ್ದಿ ನೀಡಬೇಕು, ನಮ್ಮನ್ನು ಬಡವರಿಗೆ ಒಳ್ಳೆಯ ಸುದ್ದಿ ನೀಡಲು ನಮ್ಮನ್ನು ಅಭಿಶೇಕಿಸಲಾಗಿದೆ ಎಂದು ನಮಗೆ ದೇವರು ತಿಳಿಸುತ್ತಾನೆ. ಮದರ್ ತೇರೆಸಾ ಹಾಗೇ ಮಾಡಿದರು. ಅವರು ಬಡವರ, ರೋಗಿಗಳ, ಅನಾಥರ ಅನನ್ಯ ಸೇವೆ ಮಾಡಿದರು, ಬಡವರ, ರೋಗಿಗಳ, ಅನಾಥರಲ್ಲಿ ಯೇಸುವನ್ನು ನೋಡಿದರು. ಅವರು ಯೇಸುವುನ ನೀಜ ಅನುಯಾಯಿಯಾಗಿದ್ದರು, ಯೇಸು ಬಡವರ, ರೋಗಿಗಳ, ಅನಾಥರ ಮಾಡಿ ನಮಗೆ ಆದರ್ಶಪ್ರಾಯವಾಗಿದ್ದರು, ಇಂದು ಅದೇ ಯೇಸುವಿನ, ಬಾಲಯೇಸುವಿನ ಮುಗ್ದಯೇಸುವಿನ ಹಬ್ಬವನ್ನು ಆಚರಿಸುತ್ತೆವೆ, ಆ ಮುಗ್ದ ಯೇಸು ಹೇಳುತ್ತಾನೆ, ಎಷ್ಟು ಹೆಚ್ಚು ಗೌರವಿಸುತ್ತಿಯೊ ಅಷ್ಟೆ ಹೆಚ್ಚು ನಿನ್ನನ್ನು ಆಶಿರ್ವಾದಿಸುತ್ತೇನೆ ಎಂದು ಹೇಳುತ್ತಾನೆ, ಹಾಗಾಗಿ ಅವರಲ್ಲಿ ನಾವು ಪ್ರಾರ್ಥಿಸುವ, ಗೌರವಿಸಿ ಹೆಚ್ಚು ಆಶಿರ್ವಾದಗಳನ್ನು ಪಡೆಯೋಣ” ಎಂದು ಉದ್ಯಾವಾರ ಧರ್ಮಕೇಂದ್ರದ ಧರ್ಮಗುರು ವಂ। ಅನಿಲ್ ಡಿಸೋಜಾ ಸಂದೇಶ ನೀಡಿದರು.
ಅವರು ಕೊಟೇಶ್ವರ ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ ರಂದು ಪ್ರಧಾನ ಯಾಜಕರಾಗಿ ಬಾಲ ಜ. 17 ರಂದು ಆಚರಿಸಲಾದ ಯೇಸುವಿನ ವಾರ್ಷಿಕ ಹಬ್ಬದಂದು ಪವಿತ್ರ ಬಲಿದಾನ ಅರ್ಪಿಸಿ ಸಂದೇಶ ನೀಡಿದರು.
ಈ ಬಾಲಯೇಸುವುನ ಮಹಾ ಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನ ಅ|ವಂ|ಪೌಲ್ ರೇಗೊ, ಕಾರ್ಮೆಲ್ ಧರ್ಮಗುರುಗಳಿಗೆ ಹಬ್ಬದ ಶುಭ ಕೋರಿದರು. ಕುಂದಾಪುರ ವಲಯದ ಇಗರ್ಜಿಗಳ ಧರ್ಮಗುರುಗಳು, ಕಾರ್ಮೆಲ್ ಪಂಗಡದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಹಲವು ಕಾನ್ವೆಂಟಿನ ಧರ್ಮಭಗಿನಿಯರು, ಮತ್ತು ಭಕ್ತಾಧಿಗಳು ಹಾಜರಿದ್ದರು.
ಈ ಹಬ್ಬದ ತಯಾರಿಗಾಗಿ ವಂ।ರಿಚಾರ್ಡ್ ಮಿನೆಜೇಸ್ ಮತ್ತು ಬ್ರದರ್ ಪ್ರಕಾಶ್ ದಿಸೋಜಾ ಪಂಗಡದಿಂದ 3 ದಿನಗಳ ಧ್ಯಾನ ಕೂಟವನ್ನು ಎರ್ಪಡಿಸಲಾಗಿತ್ತು. ಹಬ್ಬದ ಆರಂಭದ ಸೂಚಕವಾಗಿ ಧ್ವಜವನ್ನು ಎರಿಸಲಾಗಿದ್ದು, ಹಬ್ಬ ಮುಗಿದ ನಂತರ ಗೌರವ ಆರೋಹಣ ಮಾಡಲಾಯಿತು.
ಹಬ್ಬದ ಬಲಿದಾನಕ್ಕೆ ಕಾರ್ಮೆಲ್ ಗಾಯನ ಪಂಗಡದವರು, ಭಕ್ತಿಗೀತೆಗಳಿಂದ ಸಹಕರಿಸಿದರು. ಕಟ್ಕೆರೆ ಬಾಲಯೇಸುವಿ ಆಶ್ರಮದ ವಂ।ಜೋ ತಾವ್ರೊ, ವಂ।ಜೋಸ್ವಿ ಸಿದ್ದಕಟ್ಟೆ, ವಂ।ಜೋನ್ ಸಿಕ್ವೇರಾ, ವಂ। ಸ್ಟೀವನ್ ಡಿಸೋಜಾ ಉಪಸ್ಥಿತರಿದ್ದರು, ಕಟ್ಕೆರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಪ್ರವೀಣ್ ಪಿಂಟೊ ವಂದಿಸಿ ಶುಭ ಹಾರೈಸಿದರು.











































































































