

ಶ್ರೀನಿವಾಸಪುರ : ಭಾನುವಾರ ಬೆಳಗ್ಗೆ 11-30 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ದಾವಿಸಿ ಬಾಗಿಲು ಮುರಿದು ನಂತರ ಪರಿಶೀಲಿಸಿದ ವೇಳೆಯಲ್ಲಿ ವಿಷಪ್ರಾಸನ ಮಾಡಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ರಾಯಲ್ಪಾಡು ಪೊಲೀಸ್ಠಾಣಾ ವ್ಯಾಪ್ತಿಯ ಉಪ್ಪರಪಲ್ಲಿ ಹೊರವಲಯದಲ್ಲಿ ಇರುವ ಕೋಳಿಫಾರಂನಲ್ಲಿ ಕೆಲಸ ಮಾಡಲು ಕಳೆದ 15 ದಿನಗಳ ಹಿಂದೆಯಷ್ಟೆ ಈ ಕೋಳಿಫಾರಂನಲ್ಲಿ ಕೆಲಸಕ್ಕೆ ಬಂದಿದ್ದ ಅಸ್ಸಾಂ ಮೂಲದ ಕುಟುಂಬವು ಕೋಳಿಫಾರಂ ಆವರಣದಲ್ಲಿ ಇರುವ ಮನೆಯಲ್ಲಿ ರೂಮ್ ಬಾಗಿಲು ಚಿಲುಕ ಹಾಕಿಕೊಂಡ ಅಸ್ಸಾಂ ಮೂಲದ ಗಂಡ ಮಹಬೂಬ್ ರೆಹಮಾನ್ (30) , ಹೆಂಡತಿ ಫರೀದ್ಖುರಮ್ (20 ) ವಿಷಪ್ರಾಸನವನ್ನು ಮಾಡಿ ಅಸುನೀಗಿದ್ದಾರೆ ವಿಷಪ್ರಾಸನಕ್ಕೆ ಕಾರಣ ತಿಳಿದುಬಂದಿಲ್ಲ.
ಭಾನುವಾರ ಬೆಳಗ್ಗೆ 11-30 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ದಾವಿಸಿ ಬಾಗಿಲು ಮುರಿದು ನಂತರ ಪರಿಶೀಲಿಸಿದ ವೇಳೆಯಲ್ಲಿ ವಿಷಪ್ರಾಸನ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿಗಳಿಗೆ 7 ದಿನದ ಹೆಣ್ಣು ಮಗುವಿದೆ . ವಿಷಪ್ರಾಸನ ಮಾಡಿರುವವರನ್ನು ಹಾಗು ಮಗುವನ್ನು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಹಸುಗೂಸು ಆರೋಗ್ಯವಾಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ದಂಪತಿಗಳಿಬ್ಬರ ಶವವನ್ನು ಶವಪರೀಕ್ಷೆ ಮಾಡಲಾಗಿದೆ. ಪೊಲೀಸರು ಮೃತರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಎಸ್ಪಿ ಮೊನಿಶಾ, ಗೌನಿಪಲ್ಲಿ ವೃತ್ತದ ಪೊಲೀಸ್ ನಿರೀಕ್ಷಕ ಶಿವಕುಮಾರ್ , ರಾಯಲ್ಪಾಡು ಪಿಎಸ್ಐ ರಾಮು ಹಾಗು ಸಿಬ್ಬಂದಿ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

