

ಬಾರ್ಕೂರು; ಕಳೆದ 30 ವರ್ಷಗಳಿಂದ ಬಾರ್ಕೂರು ನೇಶನಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಪ್ರಾಧ್ಯಪಕಿ ಶಿಸ್ತು ಬುದ್ಧವಾಗಿ ಕರ್ತವ್ಯ ನಿರ್ವಹಿಸಿ
ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ ಪ್ರಾಧ್ಯಪಕಿ ಜ್ಯೋತಿ ಶೆಟ್ಟಿ ಅವರಿಗೆ ಇಂದು ಶಾಲಾ ಆಡಳಿತ ಮಂಡಳಿಯ ವತಿಯಿಂದ ಅಭಿನಂದನಾ ಸಮಾರಂಭವನ್ನು ನೇಶನಲ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು
ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ(ರಿ )ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀ ಬಿ ಶಾಂತರಾಮ ಶೆಟ್ಟಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ :
ಶ್ರೀ ರಾಜರಾಮ ಶೆಟ್ಟಿ ಸಂಚಾಲಕರು ಎಸ್.ವಿ.ವಿ.ಎನ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ
ಶ್ರೀ ಅಶೋಕ್ ಕುಮಾರ್ ಶೆಟ್ಟಿ (ಕಾರ್ಯ ದರ್ಶಿ ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ )ಬಾರ್ಕೂರು
ಶ್ರೀ ಆರ್ಚಿಬಾಲ್ಡ್ ಪುರ್ಟಾಡೊ ( ಆಡಳಿತ ಸಂಯೋಜಕರು ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ(ರಿ )ಬಾರ್ಕೂರು )
ಶ್ರೀಮತಿ ಉಷಾ ಕಿರಣ ಶೆಟ್ಟಿ (ಪ್ರಾಂಶುಪಾಲರು ನೇಶನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು )
ಶ್ರೀಮತಿ ಹೇಮಾವತಿ ಪಿ.ಎಸ್ (ಹಿರಿಯ ಸಹ ಶಿಕ್ಷಕಿ ನೇಶನಲ್ ಪದವಿ ಪೂರ್ವ ಕಾಲೇಜು, ಬಾರ್ಕೂರು)
ಶ್ರೀ ಕರುಣಾಕರ ಶೆಟ್ಟಿ (ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ನೇಶನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು)
ಪ್ರೊ.ಭಾಸ್ಕರ್ ಶೆಟ್ಟಿ ಸಲ್ವಾಡಿ (ಪ್ರಾಂಶುಪಾಲರು ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು )
ಶ್ರೀ ಯು ಮೋಹನ್ ರಾವ್ (ನಿವೃತ್ತ ವಾಣಿಜ್ಯ ಶಾಸ್ತ್ರ ಉಪಾನ್ಯಾಸಕರು ನೇಶನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು )
ಶ್ರೀ ರತ್ನಾಕರ ಶೆಟ್ಟಿ, ಶ್ರೀ ಶಂಕರ ಶೆಟ್ಟಿ
ಶ್ರೀರಾಮಚಂದ್ರ ಕಾಮತ್
ಶ್ರೀ ಶ್ರೀನಿವಾಸ ಶೆಟ್ಟಿಗಾರ ರಂಗನ ಕೇರಿ ಬಾರ್ಕೂರು ( ಶಾಲಾಭಿವೃದ್ಧಿ ಸಮಿತಿಯ ಸದಸ್ಯರು )
ಶ್ರೀ ಉದಯ ಶೆಟ್ಟಿ ( ಮುಖ್ಯ್ಯೊಪಾಧ್ಯಾಯರು ನೇಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ )
ಶ್ರೀ ಚಂದ್ರ ಶೇಖರ್ ಶೆಟ್ಟಿ ( ನಿವೃತ್ತಮುಖ್ಯೋಪಾಧ್ಯಾಯರು )
ಶ್ರೀ ಉದಯ್ ಕುಮಾರ್ ಶೆಟ್ಟಿ, ಶ್ರೀ ಸೀತಾರಾಮ ನಾಯ್ಕ್, ಶ್ರೀ ಅಜಿತ್ ಕುಮಾರ್ ಶೆಟ್ಟಿ, ಶ್ರೀ ನೇಮಿರಾಜ್ ಶೆಟ್ಟಿ ಉದಯ ಶೆಟ್ಟಿ ( ನಿವ್ರತ್ತಅಧ್ಯಾಪಕರು)
ಶ್ರೀ ಸುರೇಶ್ ಎಂ (ಸುಭಾನು)
ಶ್ರೀಮತಿ ಸುಪ್ರಭಾ ಶೆಟ್ಟಿ (ಹಳೆ ವಿದ್ಯಾರ್ಥಿ ನೇಶನಲ್ ಪದವಿ ಪೂರ್ವ ಕಾಲೇಜು ಬಾರ್ಕೂರು
ಆಡಳಿತ ಮಂಡಳಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದಸದಸ್ಯರು, ರೋಟರಿ ಕ್ಲಬ್ ಸದಸ್ಯರು ನೇಶನಲ್ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಬೋಧಕ,ಬೋಧಕೇತರ ವೃಂದದವರು ಶ್ರೀಮತಿ ಜ್ಯೋತಿ ಶೆಟ್ಟಿ ಅವರ ಬಂಧುಗಳು ಹಿತೈಷಿಗಳು ಆತ್ಮೀಯರು ಉಪಸ್ಥಿತರಿದ್ದರು
ಶಾಲಾ ಆಡಳಿತ ಮಂಡಳಿಯ ವತಿಯಿಂದ ಶ್ರೀಮತಿ ಜ್ಯೋತಿ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಿ ಅವರ ವೃತ್ತಿ ಜೀವನದ ಕಾರ್ಯವೈಕರ್ಯಗಳನ್ನು ಶ್ಲಾಘಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ಜ್ಯೋತಿ ಶೆಟ್ಟಿ ಅವರು ತಮಗೆ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಲು ಉತ್ತಮ ಅವಕಾಶ ಕಲ್ಪಿಸಿದ ತಮ್ಮ ಗುರುಗಳಾದ ದಿ.ಶ್ರೀ ಬಿ ಸೀತಾರಾಮ ಶೆಟ್ಟಿ ಅವರನ್ನು ಸ್ಮರಿಸುತ್ತಾ ತಮ್ಮ ವೃತ್ತಿ ಜೀವನದಲ್ಲಿ ಸಂಪೂರ್ಣ ಸಹಕಾರ ನೀಡಿದ ಶಾಲಾ ಆಡಳಿತ ಮಂಡಳಿ ಯವರಿಗೆ, ಸಹೋದ್ಯೋಗಿಗಳಿಗೆ, ವೃತ್ತಿಬಾಂಧವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು,ಸಮಾರಂಭದ ಕೊನೆಯಲ್ಲಿ ಔತಣಕೂಟ ಏರ್ಪಡಿಸಲಾಯಿತು
ಶ್ರೀ ಅಶೋಕ್ ಕುಮಾರ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು. ಕನ್ನಡ ಅಧ್ಯಾಪಕರಾದ ಶ್ರೀ ಕೆ. ಪಿ ಮಾರುತಿ ಕಾರ್ಯಕ್ರಮ ನಿರೂಪಿಸಿದರು.














