

ಹಳ್ನಾಡು; ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ .
ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯರು ಹಾಗೂ ಶಿಕ್ಷಕ ವೃಂದದವರು ಆರತಿಯನ್ನು ಬೆಳಗಿ,ತಿಲಕವನ್ನಿಟ್ಟು ,ಹೂವನ್ನು ಸಿಂಪಡಿಸಿ,ಪ್ರತಿಯೊಂದು ಮಗುವಿಗೂ ಉಡುಗೊರೆಯೊಂದಿಗೆ ಸಿಹಿತಿನಿಸನ್ನು ನೀಡಿ ಸ್ವಾಗತಿಸಿದರು.
ಶಾಲೆಗೆ ಆಗಮಿಸಿದ ನೂತನ ವಿದ್ಯಾರ್ಥಿಗಳು ‘ತಾಯಿ ಸರಸ್ವತಿ ಹಾಗೂ ಶಾರದಾ ಮಾತೆಗೆ’ ಸಾಮೂಹಿಕವಾಗಿ ಆರತಿಯನ್ನು ಬೆಳಗಿ, ವಿದ್ಯಾಸರಸ್ವತಿಯ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಮೊದಲ ದಿನವನ್ನು ಬರಮಾಡಿಕೊಂಡರು.
ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ತುಳಸಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಯುತ ಕೃಷ್ಣರಾಯ ಶಾನುಬಾಗ್ ರವರು ಮಾತನಾಡಿ “ಮಕ್ಕಳು ಒಳ್ಳೆಯ ಸಂಸ್ಕಾರ ಪಡೆದು ಸಮಾಜದಲ್ಲಿ ಉತ್ತಮ ಸತ್ಪ್ರಜೆಯಾಗಿ ,ನಾಗರಿಕರಾಗಿ ರೂಪುಗೊಳ್ಳಬೇಕು.ಇದೇ ಶಿಕ್ಷಣದ ಉದ್ದೇಶ ” ಎಂದು ಮುಂದಿನ ವಿದ್ಯಾಭ್ಯಾಸಕ್ಕೆ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ರೇಷ್ಮಪ್ರದೀಪ್, ಹಾಗೂ ಶಿಕ್ಷಕ -ಶಿಕ್ಷಕೇತರ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


