ನವದೆಹಲಿ: 2024ರ 543 ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ (ಮಾರ್ಚ್ 16) ಘೋಷಿಸಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ ಎಂದು ತಿಳಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಲೋಕಸಭಾ ಚುನಾವಣಾ ದಿನಾಂಕದ ವಿವರವನ್ನು ತಿಳಿಸಿದರು
ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಕೇಂದ್ರದ ನೂತನ ಸರ್ಕಾರ ರಚನೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಯ ಅವಧಿ ಕೂಡಾ ಮುಕ್ತಾಯಗೊಳ್ಳಲಿದ್ದು, ಇದರ ಚುನಾವಣೆ ಕೂಡಾ ಲೋಕಸಭೆ ಚುನಾವಣೆ ಜತೆಗೆ ನಡೆಯಲಿದೆ.
ದಿನಾಂಕ ಘೋಷಣೆ: ಏಪ್ರಿಲ್ 19ರಂದು ಮೊದಲ ಹಂತದ ಮತದಾನ. 2ನೇ ಹಂತ ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮತದಾನ , ಮೇ 7ರಂದು ಮೂರನೇ ಹಂತ, ಮೇ 13 4ನೇ ಹಂತದ ಮತದಾನ, ಮೇ 20 5ನೇ ಹಂತ, ಮೇ 25 6ನೇ ಹಂತ, ಜೂನ್ 1 7ನೇ ಹಂತದ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಇಲ್ಲಿದೆ ಸಂಪೂರ್ಣ ಪಟ್ಟಿ
ದೇಶದಲ್ಲಿ ಏಳು ಹಂತದಲ್ಲಿ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಏಪ್ರಿಲ್ 26ರಂದು ಮತದಾನ ನಡೆಯುವ ಕ್ಷೇತ್ರಗಳು (ದಕ್ಷಿಣ ಕರ್ನಾಟಕ)
1.ಉಡುಪಿ-ಚಿಕ್ಕಮಗಳೂರು (ಸಾಮಾನ್ಯ)
2.ಹಾಸನ (ಸಾಮಾನ್ಯ)
3.ದಕ್ಷಿಣ ಕನ್ನಡ (ಸಾಮಾನ್ಯ)
4.ಚಿತ್ರದುರ್ಗ (ಪರಿಶಿಷ್ಟ ಜಾತಿ ಮೀಸಲು)
5..ತುಮಕೂರು (ಸಾಮಾನ್ಯ)
6.ಮಂಡ್ಯ (ಸಾಮಾನ್ಯ)
7.ಮೈಸೂರು-ಕೊಡಗು (ಸಾಮಾನ್ಯ)
8.ಚಾಮರಾಜನಗರ (ಪರಿಶಿಷ್ಟ ಜಾತಿ ಮೀಸಲು)
9. ಬೆಂಗಳೂರು ಗ್ರಾಮಾಂತರ (ಸಾಮಾನ್ಯ)
10 ಬೆಂಗಳೂರು ಉತ್ತರ (ಸಾಮಾನ್ಯ)
11. ಬೆಂಗಳೂರು ಕೇಂದ್ರ (ಸಾಮಾನ್ಯ)
12. ಬೆಂಗಳೂರು ದಕ್ಷಿಣ (ಸಾಮಾನ್ಯ)
13.ಚಿಕ್ಕಬಳ್ಳಾಪುರ (ಸಾಮಾನ್ಯ)
14.ಕೋಲಾರ (ಪರಿಶಿಷ್ಟ ಜಾತಿ ಮೀಸಲು)
ಎರಡನೇ ಹಂತದ ಮತದಾನದ ವಿವರ ಹೀಗಿದೆ
ಚುನಾವಣೆ ಘೋಷಣೆ: ಮಾರ್ಚ್ 16
ಗಜೆಟ್ ನೋಟಿಫಿಕೇಶನ್: ಮಾರ್ಚ್ 28
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್ 04
ನಾಮಪತ್ರ ಪರಿಶೀಲನೆ: ಏಪ್ರಿಲ್ 05
ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್ 08
ಮತದಾನದ ದಿನಾಂಕ: ಏಪ್ರಿಲ್ 26, ಶುಕ್ರವಾರ
ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು: (ಉತ್ತರ ಕರ್ನಾಟಕ)
1.ಚಿಕ್ಕೋಡಿ (ಸಾಮಾನ್ಯ)
2.ಬೆಳಗಾವಿ (ಸಾಮಾನ್ಯ)
3.ಬಾಗಲಕೋಟೆ (ಸಾಮಾನ್ಯ)
4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು)
5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು)
6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು)
7.ಬೀದರ್ (ಸಾಮಾನ್ಯ)
8,ಕೊಪ್ಪಳ (ಸಾಮಾನ್ಯ)
9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು)
10. ಹಾವೇರಿ (ಸಾಮಾನ್ಯ)
11. ಧಾರವಾಡ (ಸಾಮಾನ್ಯ)
12.ಉತ್ತರ ಕನ್ನಡ (ಸಾಮಾನ್ಯ)
13.ದಾವಣಗೆರೆ (ಸಾಮಾನ್ಯ)
14.ಶಿವಮೊಗ್ಗ (ಸಾಮಾನ್ಯ)
ಎರಡನೇ ಹಂತದ ಮತದಾನದ ವಿವರ ಹೀಗಿದೆ
ಚುನಾವಣೆ ಘೋಷಣೆ: ಮಾರ್ಚ್ 16
ಗಜೆಟ್ ನೋಟಿಫಿಕೇಶನ್: ಏಪ್ರಿಲ್ 12
ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್ 19
ನಾಮಪತ್ರ ಪರಿಶೀಲನೆ: ಏಪ್ರಿಲ್ 20
ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್ 22
ಮತದಾನದ ದಿನಾಂಕ: ಮೇ 07, ಮಂಗಳವಾರ
ಉಪ ಚುನಾವಣೆ ದಿನಾಂಕ ಘೋಷಣೆ: 26 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಆಯೋಗ ದಿನಾಂಕ ಘೋಷಿಸಿದೆ. ಏಪ್ರಿಲ್ 19ರಂದು ಸಿಕ್ಕಿಂ ಉಪ ಚುನಾವಣೆ. ಮೇ 13 ಆಂಧ್ರಪ್ರದೇಶ ಉಪ ಚುನಾವಣೆ. ಏಪ್ರಿಲ್ 19 ಅರುಣಾಚಲ ಪ್ರದೇಶ ಉಪಚುನಾವಣೆ. ಮೇ 25ರಂದು ಒಡಿಶಾ ವಿಧಾನಸಭಾ ಚುನಾವಣೆ. ಕರ್ನಾಟಕದ ಸುರಪುರ ಉಪಚುನಾವಣೆ ನಡೆಯಲಿದೆ.