ಆಗ್ರಾ: ವರದಕ್ಷಿಣೆಯಾಗಿ ಕೊಡದಿದ್ದಕ್ಕೆ ಕಾರು ವರನೊಬ್ಬ ಕೇವಲ ಎರಡು ಗಂಟೆಯೊಳಗೆ ಮದುವೆಯಾದ ಎರಡೇ ಗಂಟೆಯಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿರುವ ಅಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇದೀಗ ಪೊಲೀಸರು ವರ ಮೊಹಮ್ಮದ್ ಆಸಿಫ್ ಸೇರಿದಂತೆ ಅರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ವಧುವಿನ ಸಹೋದರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣೆಕ್ಕೆ ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆ ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ತನ್ನ ಓರ್ವ ತಂಗಿ ಗೌರಿ ತನ್ನ ಪತಿಯ ಮನೆಯವರೊಂದಿಗೆ ಮನೆಗೆ ಹೋಗಿದ್ದಾಳೆ. ಆದರೆ ಡಾಲಿಯ ಪತಿ ಮೊಹಮ್ಮದ್ ಆಸಿಫ್ ತನಗೆ ಪರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ತಗಾದೆ ತೆಗೆದಿದ್ದಾನೆ. ಇದಕ್ಕೆ ಒತ್ತು ನೀಡಿ ವರನ ಮನೆಯ ಕಡೆಯವರೂ ಇದೇ ವಿಚಾರದಲ್ಲಿ ತಗಾದೆ ತೆಗೆದು ಕಾರನ್ನು ಕೊಡಿಸುವಂತೆ ಕೇಳಿದ್ದಾರೆ. ಇಲ್ಲದಿದ್ದಲ್ಲಿ, ತಕ್ಷಣವೇ ಐದು ಲಕ್ಷ ರೂ. ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ.
ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಅವರು ಕುಪಿತಗೊಂಡು ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್ ಹೇಳಿಸಿ ಹೊರಟು ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪರ ಮೊಹಮ್ಮದ್ ಅಸಿಫ್ ಹಾಗೂ ಅತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ