ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಡಿಕೋಸ್ತಾ ಉತ್ತೀರ್ಣ / Vinard DCosta of Kundapur clears CA Final Examination



ಕುಂದಾಪುರ, ಜು.5: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 2023 ಮೇ ಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ.ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿದ್ದಾರೆ.
ಇವರು ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು “ಇಂಟರ್ ಮಿಡಿಯಟ್” ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್‍ಶಿಪ್ ನ್ನು ಬೆಂಗಳೂರಿನ ‘ಮುರುಳಿ ಆ್ಯಂಡ್ ಸುಮಿತ್’ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು 432 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇವನು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮತ್ತು ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಭಂಡಾರ್ಕರ್ಸ್ ಪದವಿ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಗಳಿಸಿರುತ್ತಾನೆ.

Vinard DCosta of Kundapur passes the CA Final

Kundapur, June 5: Vinard J. DCosta of Kundapur has become a Chartered Accountant after clearing the CAfinal examination conducted by the Institute of Chartered Accountants of India held in May 2023

He is the son of writer and journalist Bernard DCosta and Vinaya DCosta of Kundapur. He was trained for Intermediate examinations from Carriers Coaching and Space Academy and perceived his Articleship in Bangalore under the Guidance of Murali and Sumeet- Chartered Accountants. He has secured 432 marks in CA Final Examination. He is a student of Holy Rosary English medium school and St. Mary’s P U College, Kundapura. He is a B.Com graduate from Bhandarkar’s Arts & Science College kundapura.