ಕುಂದಾಪುರ ಜೇಕಬ್ ಆಸಿಸಿ ಡಿಸೋಜಾ ನಿಧನ  (70)

ಜನನ: 05-07-1952, ನಿಧನ: 31-08-2022

ಕುಂದಾಪುರ, ಅ.31: ಸ್ಥಳೀಯ ಚಿಕ್ಕನಸಾಲು ರಸ್ತೆ ನಿವಾಸಿ ಜೇಕಬ್ ಆಸಿಸಿ ಡಿಸೋಜಾ,ಇಂದು ಅಗೋಸ್ತ್ 31 ರಂದು ಅಲ್ಪ ಸಮಯದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

    ಅವರು ತನ್ನ ಯುವ ಪ್ರಾಯದಲ್ಲಿ ಕುಂದಾಪುರ ರೋಜರಿ ಚರ್ಚ್ ಇಗರ್ಜಿಯ ಸಿ.ವೈ.ಎಮ್. ಇದರ ಅಧ್ಯಕ್ಷಾಗಿದ್ದು, ಚಿಕ್ಕ ಪ್ರಾಯದಲ್ಲಿ (28 ವರ್ಷದಲ್ಲಿ) ರೋಜರಿ ಚರ್ಚ್ ಇಗರ್ಜಿಯ ಉಪಾಧ್ಯಕ್ಷಾಗಿ ಆಯ್ಕೆಯಾಗಿದ್ದರು, ಅವರು ಈ ಹುದ್ದೆಯನ್ನು ಎರಡು ಭಾರಿ ನಿಭಾಯಿಸಿದ್ದರು. ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿ ಅಧ್ಯಕ್ಷ ಹಾಗೇ ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೇ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು, ಈ ಮೊದಲು ಕುಂದಾಪುರ ಪುರಸಭೆಯಲ್ಲಿ ನೌಖರಾಗಿ ದುಡಿದು, ಬಳಿಕ ಉದ್ಯಮಿಯಾದರು. ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಸ್ಥಾಪಕ ನಿರ್ದೇಶಕರಾಗಿದ್ದು, ಪ್ರಸ್ತುತ 8 ವರ್ಷಗಳಿಂದ ನಿರ್ದೇಶಕರಾಗಿದ್ದರು.

    ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಸೊಸೆಯಂದಿರು, ಹಾಗೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.