ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಹುತಾತ್ಮ ಯೋಧರನ್ನು ನೆನಪಿಸಿ ಮಂಗಳವಾರ ಸಂಘದ ಕಛೇರಿಯಲ್ಲಿ ಭಾರತಾಂಬೆಯ ಭಾವಚಿತ್ರದೆದುರು ಮೊಂಬತ್ತಿ ಬೆಳಗಿಸಿ 23 ವರ್ಷಗಳ ಹಿಂದೆ ದೇಶಕ್ಕೆ ಕಾರ್ಗಿಲ್ ವಿಜಯ ತಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿದವರು ಪ್ರತಿಯೊಂದು ಕೆಲಸ ಕಾರ್ಯ, ಸಾಧನೆ, ಗೆಲುವಿನ ಹಿಂದೆ ಬಹಳಷ್ಟು ಜನರ ಬಲಿದಾನವಿದೆ. 1999ರಲ್ಲಿ ಪಾಕ್ ಭಾರತೀಯ ಗಡಿ ಆಕ್ರಮಿಸಿದ್ದರ ವಿರುದ್ಧ ನಡೆದ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನಪ್ಪಿದರು. 1350ಕ್ಕೂ ಅಧಿಕ ವೀರ ಯೋಧರು ಗಾಯಾಳುಗಳಾಗಿದ್ದರು. ಇಂದು ಕಾರ್ಗಿಲ್ ವಿಜಯೋತ್ಸವವಾಗಿ 23 ವರ್ಷಗಳೇ ಸಂದಿದೆ. ಕಾರ್ಗಿಲ್ ವಿಜಯ ಹಾಗೂ ಸೈನಿಕರ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಭಾರತಾಂಬೆಯ ಭಾವಚಿತ್ರದೆದುರು ನಮ್ಮ ವೀರ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ಧೇವೆ ಎಂದರು.
ಈ ಸಂದರ್ಭದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಪೂವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಉದಯ ಅಂಚನ್, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಕಾರ್ಯದರ್ಶಿ ಕಾಸ್ರಬೈಲು ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಸದಸ್ಯರಾದ ಹರೀಶ್ ಪೂಜಾರಿ, ಸುದರ್ಶನ್ ಕುಂದರ್, ಕೀರ್ತನ್ ಕುಮಾರ್, ಪ್ರಶಾಂತ್ ಬೋಳ, ಶಾಂತರಾಮ್ ಕುಲಾಲ್, ಆರತಿ ಕುಮಾರಿ, ಸುಲೋಚನಾ ಕೋಟ್ಯಾನ್, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಹರಿಣಾಕ್ಷಿ ಪೂಜಾರಿ ಮೊದಲಾದವರಿದ್ದರು.
ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿ ಹುತಾತ್ಮರಾದ ವೀರ ಯೋಧರಿಗೆ ಮೌನ ಪ್ರಾರ್ಥನೆ ಮಾಡಲಾಯಿತು.