ಶ್ರೀನಿವಾಸಪುರ: ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಎಸ್.ಅನಸೂಯ ಬಾಬು ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಗೀತಾ ರಾಮಚಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಸಲಾಯಿತು.
ಒಟ್ಟು 19 ಸದಸ್ಯರ ಪೈಕಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಎಸ್.ಅನಸೂಯ ಬಾಬು 10 ಮತ ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಟಿ.ಎಚ್.ಲಕ್ಷ್ಮಿದೇವಮ್ಮ 9 ಮತ ಪಡೆದು ಸೋಲನ್ನಪ್ಪಿದರು.
ಚುನಾವಣಾಧಿಕಾರಿ ಎಂ.ಶ್ರೀನಿವಾಸನ್, ಪಿಡಿಒ ಶಂಕರಪ್ಪ, ಮುಖಂಡರಾದ ಮಂಜುನಾಥರೆಡ್ಡಿ, ಭೀಮಣ್ಣ, ನಾಗಾರ್ಜುನ, ರಾಮಮೂರ್ತಿ, ಅಶೋಕ್, ಶ್ರೀರಾಮರೆಡ್ಡಿ ಇದ್ದರು.