ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಶ್ರೀದೇವಿ ಆಸ್ಪತ್ರೆಯ ಅಂಬುಲೆನ್ಸಿಗೆ ಆಕ್ಸಿಜನ್ ಕೋನ್ಸೆಂಟ್ರೇಟರ್ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಶ್ರೀದೇವಿ ಆಸ್ಪತ್ರೆಯ ಅಂಬುಲೆನ್ಸಿಗೆ ಆಕ್ಸಿಜನ್ ಕೋನ್ಸೆಂಟ್ರೇಟರನ್ನು ದೇಣಿಗೆಯಾಗಿ ನೀಡಲಾಯಿತು. ಈ ದೇಣಿಗೆ ಯನ್ನು ಶ್ರೀ ಹಂದೆಯವರು ಸ್ವೀಕರಿಸಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಶಾಂತಾರಾಮ್ ಪ್ರಭು, ನಾರಾಯಣ ದೇವಾಡಿಗ, ಸತ್ಯನಾರಾಯಣ ಪುರಾಣಿಕ ಮತ್ತು ಬಿ.ಎಮ್. ಚಂದ್ರಶೇಖರ ಉಪಸ್ಥಿತರಿದ್ದರು.