JANANUDI NEWS NETWORK (EDITOR : BERNARD D’COSTA)
ಕುಂದಾಪುರ,ಜು.9: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕಕ್ಕೆ ಜು. 8 ರಂದು ಹತ್ತು ಒಕ್ಸಿಜನ್ ಕೊನ್ಸಂಟ್ರೇಟರನ್ನು ಕಾವೇರಿ ಆಸ್ಪತ್ರೆ ಬೆಂಗಳೂರು ಮತ್ತು ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಪ್ರಭು ಸಹೋದರರು ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯ ಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಶಾಂತಾರಾಮ್ ಪ್ರಭು, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್ ಮತ್ತು ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.