ಅನಿಲದ ಬೆಲೆ ಮತ್ತೆ ಏರಿಕೆ – ಇಂದಿನಿಂದಲೇ 50 ರೂ.ಏರಿಕೆ

JANANUDI NEWS NETWORK  (EDITOR : BERNARD D’COSTA)


ನವದೆಹಲಿ : ಗೃಹ ಬಳಕೆ ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದೆ 14.2 ಕೆ.ಜಿ ತೂಕದ ಸಿಲಿಂಡರಿನ ಗೃಹಬಳಕೆಯ ಅಡುಗೆ ಅನಿಲದ ಬೆಲೆ ಇಂದಿನಿಂದ 50 ರೂಪಾಯಿ ಏರಿಕೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ತಿಳಿಸಿವೆ.
ದೇಶದ ಪ್ರಮುಖ ನಗರಗಳಲ್ಲಿ ಪರಿರಿಷ್ಕ್ರತ ದರ ಇಂದಿನಿಂದ ಜಾರಿಯಾಗಲಿದ್ದು,ರಾಷ್ಟ್ರದ ರಾಜಧಾನಿಯಲ್ಲಿ 14.3 ಕೆ.ಜಿ. ತೂಕದಕದ ಅಡುಗೆ ಅನಿಲದ ಸಿಲಿಂಡರ್ ದರ 1,058.ರೂಪಾಯಿ ಆಗಿದ್ದು, ಚೆಂಗಳೂರಿನಲ್ಲಿ 1055 ರೂಫಾಯಿ. ಮುಂಬೈನಲ್ಲಿ 1.052 ರೂಪಾಯ, ಚನ್ನೈನಲ್ಲಿ 1, 068 ರೂಪಾಯಿ. ಕೊಲ್ಕತ್ತಾದ 1.068 ರೂಪಾಯಿಯಾಗಿದೆ.
ಇದೇ ವೇಳೆ 5 ಕೆ.ಜಿ. ಗೃಹ ಬಳಕೆ, ಸಿಲಿಂಡರ್‌ ಬೆಲೆ ಕೂಡಾ ಪರಿಷ್ಕರಿಸಲಾಗಿದ್ದು, 18 ರೂಪಾಯಿ ಎರಿಕೆ ಕಂಡಿದೆ; 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ ದರ 8. 5 ರೂಪಾಯಿ ಪ್ರತಿ ಸಿಲಿಂಡರ್‌ ಸಂತೆ ಇಳಿಕೆಯಾಗಿದೆ.