ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕಿನ ಕೊಳತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಎನ್.ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷೆ ಕವಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಸಲು ಸಿದ್ಧತೆ ಮಾಡಲಾಗಿತ್ತು. ಒಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ ಪರಿಣಾಮವಾಗಿ ಕೆ.ಎನ್.ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿರುವುದದಾಗಿ ಚುನಾವಣಾಧಿಕಾರಿ ಎಂ.ಕೆ.ಹುಸೇನ್ ಸಾಬ್ ಪ್ರಕಟಿಸಿದರು.
ಪಿಡಿಒ ಮೆಹರ್ ತಾಜ್, ಉಪಾಧ್ಯಕ್ಷೆ ವರಲಕ್ಷ್ಮಿ, ಮುಖಂಡರಾದ ಶಶಿಕುಮಾರ್, ಪ್ರಸನ್ನ, ಚಂಗಪ್ಪ, ದೇವರಾಜ್ ಇದ್ದರು.