ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ವಿಶ್ವ ಯೋಗ ದಿನಾಚರಣೆ

JANANUDI.COM NETWORK


ಕುಂದಾಪುರ:ಯೋಗದಿಂದ ಆರೋಗ್ಯವಂತರಾಗಿ ಬದುಕಬಹುದು.ಮಾನಸಿಕವಾಗಿ,ದೈಹಿಕವಾಗಿ ದೇಹ ಸದೃಢವಾಗುತ್ತದೆ.ಪ್ರತಿ ನಿತ್ಯ ಯೋಗ ಮಾಡುವುದರಿಂದ ಸದಾ ಕಾಲ ಉತ್ಸಾಹದಿಂದ ಇರಬಹುದು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯ್ಕ್ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ 21 ಕರ್ನಾಟಕ ಬೆಟಾಲಿಯನ್
ಎನ್ ಸಿಸಿ ಆಶ್ರಯದಲ್ಲಿ ನಡೆದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾರಂಭ ದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿ ಅಸುಂತಾ ಲೋಬೋ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಎನ್ ಸಿಸಿ ಅಧಿಕಾರಿ ಭಾಸ್ಕರ ಗಾಣಿಗ ಸ್ವಾಗತಿಸಿದರು. ಶಿಕ್ಷಕಿಯರಾದ ಸಿಸ್ಟರ್ ಚೇತನಾ,ಪ್ರೀತಿ ಪಾಯಸ್,ಸುಶೀಲ ಖಾರ್ವಿ,ಡೀನಾ ಪಾಯಸ್ ಸಹಕರಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.