JANANUDI.COM NETWORK
ಮಹಾರಾಷ್ಟ್ರ: ಒಂದೇ ಕುಟುಂಬದ ಒಂಬತ್ತು ಮಂದಿ ಶವ ಮನೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಸಾಂಗ್ಲಿಯು ವಾಣಿಜ್ಯ ನಗರಿಯಿಂದ ಮುಂಬೈನಿಂದ 350 ಕಿಲೋ ಮೀಟರ್ ದೂರದಲ್ಲಿದ್ದು, ಸಾಂಗ್ಲಿ ಜಿಲ್ಲೆಯ ಮಾಯ್ಸಾಲ್ ಎಂಬ ಪ್ರದೇಶದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಮ್ರತ ಪಟ್ಟವರಲ್ಲಿ ವೈದ್ಯರಾಗಿದ್ದ ಪೋಷಟ್ ಯಲ್ಲಪ್ಪ ವನ್ಮೋರೆ (52), ಸಂಗೀತಾ ಪೋಪಟ್ ವನ್ಮೋರೆ (48), ಅರ್ಚನಾಪೋಷಟ್ ವನ್ಮೋರೆ (30), ಶುಭಂ ಪೋಪಟ್ ವನ್ಮೋರೆ (28), ಮಾಣಿಕ್ ಯಲ್ಲಪ್ಪ ವನ್ಮೋರೆ (49), ರೇಖಾ ಮಾಣಿಕ್‌ವನ್ಮೋರೆ (45) ಆದಿತ್ಯ ಮಾಣಿಕ್ ವನ್ಮೋರೆ (15), ಅನಿತಾ ಮಾಣಿಕ್ ವನ್ಮೋರೆ (28) ಹಾಗೂ ಅಕ್ಕತ್ಯೆ ವನ್ಮೋರೆ. (72) ಮೃತರು ಎಂದು ಗುರುತಿಸಲಾಗಿದೆ.
ಸಾಮುಹಿಕ ಕುಟುಂಬ ಸದಸ್ಯರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಆತ್ಮಹತ್ಯೆಯೇ ಕೊಲೆಯೆ ಎಂಬುದು ಸ್ಪಷ್ಟವಾಗಲಿದೆ ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೇಡಾಮ್ ತಿಳಿಸಿದ್ದಾರೆ.