ಕುಂದಾಪುರ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿಗೆ: ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 94.58% ರ ಫಲಿತಾಂಶ

JANANUDI.COM NET WORK


ಕುಂದಾಪುರ: ಸ್ಥಳೀಯ ಆರ್. ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ 94.58% ಫಲಿತಾಂಶವನ್ನು ಸಾಧಿಸಿದೆ. 388 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಅದರಲ್ಲಿ 179 ಮಂದಿ ವಿಶೇಷ ಶ್ರೇಣಿ ಹಾಗೂ 155 ಮಂದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹರ್ಷಿತಾ ಕಿಣಿ 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದರೆ, ಪ್ರಗತಿ ಪೂಜಾರಿ 590 ಅಂಕ ಪಡೆದು 9ನೇ ಸ್ಥಾನಗಳಿಸಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ ಗುರುರಾಜ್ 588 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ಸ್ಥಾನ ಪಡೆದಿರುತ್ತಾನೆ ಹಾಗೂ ಪ್ರಥ್ವಿ ಎಂ. 586 ಅಂಕ ಪಡೆದು ರಾಜ್ಯಕ್ಕೆ 11ನೇ ಸ್ಥಾನ ಪಡೆದಿರುತ್ತಾರೆ.

ವಿಜ್ಞಾನ ವಿಭಾಗ

ವಿದ್ಯಾರ್ಥಿಗಳ ಸಾಧನೆಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಬೈಂದೂರಿನ ಶಾಸಕರಾದ ಶ್ರೀ. ಬಿ.ಎಂ. ಸುಕುಮಾರ ಶೆಟ್ಟಿಯವರು ಅಭಿನಂದಿಸಿದ್ದಾರೆ.


ವಿಜ್ಞಾನ ವಿಭಾಗ:

ವಾಣಿಜ್ಯ ವಿಭಾಗ