ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ”ಯ ಸಂಬಂಧ ಚಟುವಟಿಕೆಗಳು 

JANANUDI.COM NETWORK


ಕುಂದಾಪುರ ಜೂ. 6: ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ (ELC) ನ ಸಹಯೋಗದೊಂದಿಗೆ “ವಿಶ್ವ ಪರಿಸರ ದಿನಾಚರಣೆ”ಯ ಸಂಬಂಧ ಚಟುವಟಿಕೆಗಳನ್ನು ನಡೆಸಲಾಯಿತು.    “ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು” “ಮರಗಳನ್ನು ಉಳಿಸಿ- ಪ್ರಜಾಪ್ರಭುತ್ವ ಉಳಿಸಿ” ಇತ್ಯಾದಿ ಘೋಷವಾಕ್ಯಗಳ ಫಲಕಗಳೊಂದಿಗೆ ಸಸಿಗಳನ್ನು ನೆಡಲಾಯಿತು.

ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ Voter Help Line App ಬಳಕೆ ಮಾಡುವಂತೆ ಪ್ರೋತ್ಸಾಹಿಸಲಾಯಿತು.