ಬೈಂದೂರು: 24 ಬಾಲಕ ಬಾಲಕಿಯರಿಗೆ ದೃಡೀಕರಣ (confirmation- ಕ್ರಿಜ್ಮ್‌) ಸಂಭ್ರಮ

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು

ಬೈಂದೂರು : ಸ್ಥಳೀಯ ಹೋಲಿಕ್ರಾಸ್ ಇಗರ್ಜಿಯಲ್ಲಿ 24 ಬಾಲಕ ಬಾಲಕಿಯರಿಗೆ ದೃಡೀಕರಣ (confirmation- ಕ್ರಿಜ್ಮ್‌) ಸಂಭ್ರಮನಡೆಯಿತು.ಇದನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ವಂ. ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ರವರು ನೆರವೇರಿಸಿ ಅವರು ದೃಡೀಕರಣದ ಮಹತ್ವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಇಗರ್ಜಿಯ ಧರ್ಮಗುರು ರೆ.ಫಾ. ವಿನ್ಸೆಂಟ್ ಕುವೆಲ್ಲೋ ಉಪಸ್ಥಿತರಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.