ಎಸ್ಸೆಸ್ಸೆಲ್ಸಿ ಫಲಿತಾ೦ಶ ಪ್ರಕಟ:ಎಂದಿನಂತೆ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಿಗೆ ಎ ಗ್ರೇಡ್‌ – 844 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.

JANANUDI.COM NETWORK

ಬೆ೦ಗಳೂರು :ಮಹತ್ವದ ಎಸ್ಸೆಸ್ಸೆಲ್ಸಿ ಫಲಿತಾ೦ಶ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳು ಎಂದಿನಂತೆ ಎ ಗ್ರೇಡ್‌ದಲ್ಲಿ ಸಾಧನೆ ಮರೆದಿವೆ.ರಾಜ್ಯದಲ್ಲಿ ಈ ಸಲ ಒಟ್ಟು 7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 85.53 ಒಟ್ಮಾರೆ ಫಲಿತಾಂಶವಾಗಿದೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಕಳೆದ ಹತ್ತು ವರ್ಷದಲ್ಲೇ ದಾಖಲೆ ಫಲಿತಾ೦ಶ ಈ ಬಾರಿ ಆಗಿದೆ ಎ೦ದು ಸಚಿವ ನಾಗೇಶ್‌ ಸೃಷ್ಠಪಡಿಸಿದರು.ಈ ಬಾರಿ ಯಾವುದೇ ಜಿಲ್ಲೆಗಳಿಗೆ ರೇಂಕ್ ಘೋಷಣೆ ಮಾಡಿಲ್ಲ. ಬೆ೦ಗಳೂರು ಸೌತ್‌ ಹಾಗೂ ಯಾದಗಿರಿ ಜಿಲ್ಲೆಗಳು ಬಿ.ಗ್ರೇಡ್‌ ನಲ್ಲಿ ಕಾಣಿಸಿಕೊ೦ಡಿದ್ದು ಉಳಿದ ಮೂವತ್ತರಡು ಶೈಕ್ಷಣಿಕ ಜಿಲ್ಲೆಗಳು ಎ ಗ್ರೇಡ್‌ ನಲ್ಲಿ ಫಲಿತಾ೦ಶ ದಾಖಲುಮಾಡಿವೆ ಎಂದು ಸಚಿವರು ತಿಳಿಸಿದರು.ಒಟ್ಟು 844 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.