ಅಸಾನಿ ಚಂಡಮಾರುತ ಅಲೆಯಲ್ಲಿ ತೇಲಿ ಬಂತು ಚಿನ್ನದ ಬಣ್ಣದ ರಥ!

JANANUDI.COM NETWORK


ಆಂಧ್ರಪ್ರದೇಶ: ಅಸಾನಿ ಚಂಡಮಾರುತ ದೇಶಾದ್ಯಂತ ತನ್ನ ಪ್ರಭಾವ ಬೀರುತ್ತಿದ್ದುಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕಡಲ ತೀರದಲ್ಲಿ ಅಸಾನಿ ಅಬ್ಬರದ ಅಲೆಗಳ ಮೂಲಕ ಚಿನ್ನದ ಬಣ್ಣದ ರಥವೊಂದು ಸಮುದ್ರದಲ್ಲಿ ಬಂದು ಬಿಟ್ಟಿದೆ.
ಬೌದ್ಧ ಶೈಲಿಯಲ್ಲಿರುವ ಈ ರಥ ಮ್ಯಾನ್ಮಾರ್, ಮಲೇಷಿಯಾ, ಥೈಲ್ಯಾಂಡ್ ನಿಂದ ತೇಲಿ ಬಂದಿರಬಹುದು ಎಂದು ಸದ್ಯ ಊಹಿಸಲಾಗಿದೆ. ರಥವನ್ನು ವೀಕ್ಷಿಸಲು ನೆರೆಹೊರೆಯ ಗ್ರಾಮಸ್ಥರು ಜಮಾಯಿಸಿದ್ದು, ವಿಶಿಷ್ಟವಾದ ಈ ರಥ ಎಲ್ಲರನ್ನೂ ಆಶ್ವರ್ಯ ಚಕಿತ ಮಾಡಿದೆ.
ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಈ ರಥವನ್ನು ದಡಕ್ಕೆ ಎಳೆದಿದ್ದಾರೆ. ಚಿನ್ನದ ರಥದ ದರ್ಶನ ಪಡೆಯಲು ಅಕ್ಕಪಕ್ಕದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ದಡದತ್ತ ಆಗಮಿಸಲಾರಂಭಿಸಿದ್ದಾರೆ.