ವಿಶ್ವದಾದ್ಯಂತ ರೆಡ್ ಕ್ರಾಸ್ ಡೇ – ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಹಿರಿಯ ನಾಗರಿಕರಿಗೆ  ಮಾಸ್ಕ್ ವಿತರಣೆ  ಭೋಜನದ ವ್ಯವಸ್ಥೆ

JANANUDI.COM NETWORK

ಕುಂದಾಪುರ, ವಿಶ್ವದಾದ್ಯಂತ ಮೇ 8 ರಂದು  ರೆಡ್ ಕ್ರಾಸ್ ಡೇ ಆಚರಿಸಲಾಗುತ್ತದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಅಂಗವಾಗಿ ಈ ದಿನ ಸರ್ಜನ್ ಆಸ್ಪತ್ರೆಯ ಹಿರಿಯ ನಾಗರಿಕರ ನಿವಾಸಕ್ಕೆ ಭೇಟಿ ನೀಡಿ ಎಲ್ಲಾ ನಿವಾಸಿಗಳಿಗೆ ಮಾಸ್ಕ್ ಮತ್ತು ಸಹ ಭೋಜನದ ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ. ಸೋನಿ, ಮುತ್ತಯ್ಯ ಶೆಟ್ಟಿ, ಬಶೀರ್ ಹಾಗೂ ಸರ್ಜನ್ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ವಿಶ್ವೇಶ್ವರ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಡೇ ಅಂಗವಾಗಿ ತಾರೀಕು 9 ರಂದು ಕುಂದಾಪುರ ಜೂನಿಯರ್ ಕಾಲೇಜ್ ಕಲಾಮಂದಿರ ದಲ್ಲಿ ನಾಲ್ಕು ಗಂಟೆಗೆ ಮಾಸ್ಕ್, ಗಾಲಿ ಕುರ್ಚಿ, ವಾಟರ್ ಬೆಡ್ ನೀಡಲಾಗುವುದು.