ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್  ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು

JANANUDI.COM NETWORK

ಮಲ್ಪೆಏ. 7 : ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾದ ಘಟನೆ ಇಂದು ಸಂಭವಿಸಿದೆ.  

ಇವರು ಕೇರಳದ ಕೊಟ್ಟಾಯಂನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.   ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ  42 ಮಂದಿ ವಿದ್ಯಾರ್ಥಿಗಳ ತಂಡ ಮಲ್ಪೆಗೆ ಪ್ರವಾಸಕ್ಕೆಂದು ಬಂದಿತ್ತು. ವಿದ್ಯಾರ್ಥಿಗಳ ಜೊತೆ ಇಬ್ಬರು ಉಪನ್ಯಾಸಕರೂ  ಕೂಡ ಇದ್ದರು. ನೀರಿನಲ್ಲಿ ಆಡುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಮುದ್ರ  ಪಾಲಾಗಿದ್ದಾರೆ 

   ಅವರಲ್ಲಿ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಸಮುದ್ರದಲ್ಲಿ  ಮುಳುಗಡೆಯಾದ ನ್ನೊರ್ವ  ವಿದ್ಯಾರ್ಥಿಗಾಗಿ  ಶೋಧ ಕಾರ್ಯ  ನಡೆದಿದೆ.   ಸತ್ತವರನ್ನು  ಅಲೆನ್ ರೇಜಿ, ಅಮಲ್ ಸಿ ಅನಿಲ್ ಎಂದು ಗುರುತಿಸಲಾಗಿದೆ.  ಮುಳುಗಡೆಯಾದವ ಶೋಧ ಕಾರ್ಯ ನಡೆಯುತ್ತಲಿದ್ದು ಆತನ ಹೆಸರು  ಅಂಟೋನಿ ಶೆಣೈ ಎಂದು ತಿಳಿದು ಬಂದಿದೆ.