133 ಪ್ರಯಾಣಿಕರಿದ್ದ ವಿಮಾನ ಬೋಯಿಂಗ್ 737 ಪತನ

JANANUDI.COM NETWORK


ಬೀಜಿಂಗ್ ಮಾ. 21: 133 ಪ್ರಯಾಣಿಕರಿದ್ದ ಬೋಯಿಂಗ್ 737 ಚೀನಾದ ಈಸ್ಟರ್ನ್ ಪ್ಯಾಸೆಂಜರ್ ವಿಮಾನ ಪತನಗೊಂಡಿದೆ. ಈ ಬಗ್ಗೆ ಚೀನಾದ ಪ್ರಾದೇಶಿಕ ಮಾಧ್ಯಮಗಳು ವರದಿ‌ ಮಾಡಿದೆ. ವಿಮಾನವು ಕುನ್ಮಿಂಗ್ ನಿಂದ ಗುವಾಂಗ್ಕ್ಸಿಗೆ ಪ್ರಯಾಣಿಕರನ್ನು ಹೊತ್ತು ಸಾಗಿತ್ತು.
ಆದರೆ ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ. ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ಸಾವು ನೋವಿನ ‌ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.