JANANUDI.COM NETWORK
ಕು೦ದಾಪುರ, ಮಾ: ಮನೆಯ೦ಗಳದಲ್ಲಿ ಕಸಕ್ಕೆ ಬೆ೦ಕಿ ಹಾಕಿದ ವಿಚಾರವೊ೦ದಕ್ಕೆ ನಡೆದ ವಾಗ್ಯುದ್ದ
ಜಗಳ ಕೊಲೆಯಾಗಿ ಮಾರ್ಪಟ್ಟಿದೆ. ಹೆತ್ತ. ಮಗನೇ ತ೦ದೆಯನ್ನು ಕೊಡಲಿಯಿ೦ದ ಕೊಚ್ಚಿ
ಕೊಲೆಗೈದ ಘಟನೆ ಕೋಟೇಶ್ವರ ಸಮೀಷದ ಗೋಪಾಡಿಯಲ್ಲಿ ಶನಿವಾರ ತಡರಾತ್ರಿ
ನಡೆದಿದೆ.
ಗೋಪಾಡಿ ಗ್ರಾಮದ ಹಾಲಾಡಿ ಮನೆಯ ನಿವಾಸಿ ನರಸಿ೦ಹ ಮರಕಾಲ (74)
ಕೊಲೆಯಾದ ವ್ಯಕ್ತಿ. ಪುತ್ರ ರಾಘವೇ೦ದ್ರ (36) ಕೊಲೆಗೈದ ಆರೋಪಿ. ಈಗಾಗಲೇ
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತಿದ್ದಾರೆ.
ಜಾಗದ ವಿಚಾರವಾಗಿ ಹಲವಾರು ವರ್ಶಗಳಿಂದ ಇವರೊಳಗೆ ವಿವಾದವಿದ್ದು, ಆಗಾಗ ಜಗಳವಾಗುತಿತ್ತು,
ನಿನ್ನೆ ಸಂಜೆ ನಡೇದ ಜಗಳ ವಿಪರೀತಕ್ಕೆ ಹೋಗಿದ್ದು ಕೊಲೆಯ ಹಂತಕ್ಕೆ ಮುಟ್ಟಿದೆ. ಗಂಭೀರ ಘಾಯಗೊಂಡ ನರಸಿ೦ಹ ಮರಕಾಲ ಇವರನ್ನು ಮಣಿಪಾಲ ಆಸ್ಪತ್ರೆಗೆ ಸೃಇಸಿದರು ಚಿಕಿತ್ಸೆ ಫಲಕಾರಿಯಾಗದೆ, ರಾತ್ರೆ ೧೧ ಗಂಟೆಗೆ ಪ್ರಾಣ ಬಿಟ್ಟಿದ್ದಾರೆ.ಎಂದು ಪೋಲಿಸರ ಮಾಹಿತಿಯಿಂದ ತಿಳಿದುಬಂದಿದೆ.