JANANUDI.COM NETWORK
ಕೇರಳದ, ಮಲಂಕರ ಸಿರಿಯನ್ ಆರ್ಥೊಡಾಕ್ಸ್ ಚರ್ಚಿನ ಪಾದ್ರಿ ಪಾಂಡ್ಸನ್ ಜಾನ್ ಎಂಬವರು ಅಪ್ರಾಪ್ತ ಬಾಲಕಿಗೆ ಲೈಗಿಂಕ ಕಿರುಕುಳ ನೀಡಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂದಿಸಿದ್ದಾರೆ. ಒಮ್ಮೆ ಚರ್ಚ್ನಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡುವಾಗ, ಮತ್ತೊಮ್ಮೆ ಆಕೆಯ ಸ್ವಂತ ಮನೆಯಲ್ಲಿ ಲೈಗಿಂಕ ಕಿರುಕುಳ ನೀಡಿದ್ದಾಗಿ ನಿನ್ನೆ ಗುರುವಾರ, ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಾದ್ರಿಯನ್ನು ಬಂಧಿಸಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯ ಕೂಡಲ್ನಲ್ಲಿರುವ ಆರ್ಥೊಡಾಕ್ಸ್ ಚರ್ಚ್ನ ಪಾದ್ರಿ, 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. 17 ವರ್ಷದ ಹುಡುಗಿಯನ್ನು ಕೌನ್ಸೆಲಿಂಗ್ಗಾಗಿ ತನ್ನ ಆರೈಕೆಯಲ್ಲಿ ಬಿಟ್ಟಾಗ ಪಾದ್ರಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸಂತ್ರಸ್ತೆಯ ಪೋಷಕರು ಆಕೆಗೆ ಶಿಕ್ಷಣ ಕಲಿಯುವ ಬಗ್ಗೆ ತೊಂದರೆ ಎದುರಿಸುತ್ತಿರುವ ಕಾರಣ ಆಕೆಗೆ ಕೌನ್ಸೆಲಿಂಗ್ಗಾಗಿ ಪಾದ್ರಿಯ ಸಹಾಯ ಕೇಳಿದ್ದರು.
ಪೊಲೀಸ್ ದೂರಿನ ಪ್ರಕಾರ, ಆರೋಪಿಯು ಮಾರ್ಚ್ 12 ಮತ್ತು 13 ರಂದು ಎರಡು ವಿಭಿನ್ನ ಸ್ಥಳಗಳಲ್ಲಿ ಅವಳೊಂದಿಗೆ ಎರಡು ಬಾರಿ ಅನುಚಿತವಾಗಿ ವರ್ತಿಸಿದ್ದಾನೆ. ಮೊದಲಿಗೆ, ಪಾದ್ರಿ ಸಂತ್ರಸ್ತೆಯನ್ನು ಚರ್ಚ್ನಲ್ಲಿ ಲೈಂಗಿಕವಾಗಿ ನಿಂದಿಸಿದ್ದಾನೆ. ಘಟನೆಯ ನಂತರ, ಬಾಲಕಿ ಮರುದಿನ ಚರ್ಚ್ಗೆ ಹೋಗಲು ನಿರಾಕರಿಸಿದಳು. ಆದರೆ, ಅರ್ಚಕನೇ ಆಕೆಯ ಮನೆಗೆ ತೆರಳಿ ಬಾಲಕಿಯನ್ನು ಕೋಣೆಯೊಳಗೆ ಕರೆದೊಯ್ದು ಬಾಗಿಲು ಮುಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ