ಪೋಲ್ಯಾಂಡಿನ ಕರೋಲಿನಾ ಬೈಲಾವ್ಸ್ಕಾ 2021ರ ವಿಶ್ವಸು೦ದರಿ, ಭಾರತೀಯ ಮೂಲದ ಶ್ರೀ ಸೈನಿ ಮೂದಲ ರನ್ನರ್‌

JANANUDI.COM NETWORK

ಕರೋಲಿನಾ ಬೈಲಾವ್ಸ್ಕಾ


ಪೋರ್ಟಾರೀಕೊ: 2021ರ ವಿಶ್ವಸು೦ದರಿ ಪಟ್ಟ ಪೋಲ್ಯಾ೦ಡ್‌ ದೇಶದ ಕರೋಲಿನಾ ಬೈಲಾವ್ಸ್ಕಾ ಎಂಬ ಬೆಡಗಿಗೆ ದೊರಕಿದೆ.
ಪೋರ್ಟಾರೀಕೊ ದಲ್ಲಿ ಶುಕ್ರವಾರ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರ೦ಭದಲ್ಲಿ 2019ನೇ ಸಾಲಿನ ವಿಶ್ವಸು೦ದರಿ ಜಮೈಕಾದ ಟೋನಿ ಅ್ಯನ್‌ ಸಿ೦ಗ್‌ ಪೋಲ್ಯಾ೦ಡ್‌ ನ ಕರೋಲಿನಾ ಬಿಲಾವಸ್ಥ್‌ ಗೆ ವಿಶ್ವ ಸುಂದರಿ ಕಿರೀಟ ತೊಡಿಸಿದ್ದಾರೆ.

ಶ್ರೀ ಸೈನಿ


ಈ ವಿಶ್ವಸು೦ದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕಾ ಪ್ರಜೆಯಾದ ಶ್ರೀ ಸೈನಿ ಮೂದಲ ರನ್ನರ್‌
ಅಪ್‌ ಆಗಿ ಹೊರಹೊಮ್ಮಿದ್ದಾರೆ. ಕೋಟ್‌ ಡಿ ಐವರಿಯ ಒಲಿವಿಯಾ ಯೇಸ್‌ ಎರಡನೇ ರನ್ನರ್‌ ಅಪ್‌
ಪ್ರಶಸ್ತಿಗೆ ಭಾಜನರಾಗಿರುವುದಾಗಿ ವರದಿ ತಿಳಿಸಿದೆ.