ಕಿಯೋನಿಕ್ಸ್ ಯುವ.ಕಾಮ್ ಕುಂದಾಪುರ ಇವರ ವತಿಯಿಂದ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಗಾರ

JANANUDI.COM NETWORK

ಕಿಯೋನಿಕ್ಸ್ ಯುವ.ಕಾಮ್ ಕುಂದಾಪುರ ಇವರ ವತಿಯಿಂದ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಗಾರ ನಡೆಯುತು . ಉದ್ಯೋಗವಕಾಶಗಳು ಹಾಗೂ ಸಂದರ್ಶನದಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾಹಿತಿಯನ್ನು ನೀಡಲಾಯಿತು
ಸಂಸ್ಥೆಯ ತರಬೇತುದಾರರಾದ ಶ್ರೀಮತಿ ವೀಣಾ ರವೀಂದ್ರ ಇವರು ಸಭೆಯನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಧಿರಜ್ ಹೆಜಮಾಡಿ ಇವರ ಅನುಪಸ್ಥಿಯಲ್ಲಿ ಉಪಪ್ರಾಂಶುಪಾಲರಾದ ಶ್ರೀಮತಿ ಅಂಬಿಕಾ ಧೀರಜ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ತರಬೇತುದಾರರಾಗಿ ಶ್ರೀ ಎಲ್ಸನ್ ಡಿಸೋಜ ಹಾಗೂ ಶ್ರೀ ಆಲ್ಡ್ರೀನ್ ಡಿಸೋಜ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು ಅಂತಿಮವಾಗಿ ಶ್ರೀಮತಿ ವಿನೋದ ಇವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿಯರಾದ ಶ್ರೀಮತಿ ಅಂಜಲಿ, ಕುಮಾರಿ ಸಂಧ್ಯಾ, ಶ್ರೀಮತಿ ಶಾಂತಿ, ಶ್ರೀಮತಿ ನಿಶ್ಮಿತಾ, ಕುಮಾರಿ ವಿನುತಾ, ಶ್ರೀಮತಿ ಶುೃತಿ ಉಪಸ್ಥಿತರಿದ್ದರು. ಜೊತೆಯಾಗಿ ಸಂಸ್ಥೆಯ ಎಲ್ಲಾ ಶಿಕ್ಷಕೇತರ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.