ಜೇಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ರಿಕ್ಷಾ ಚಾಲಕರಿಗೆ ಸನ್ಮಾನ

JANANUDI.COM NETWORK

ಕುಂದಾಪುರ,ಮಾ.8: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜೇಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ಮಹಿಳಾ ಸಬಲೀಕರಣ ದಡಿಯಲ್ಲಿ ಮೂವರು ಮಹಿಳಾ ರಿಕ್ಷಾ ಚಾಲಕರನ್ನು ಗುರುತಿಸಿ ಸನ್ಮಾನಿಸಲಾಯಿತು .
ಕಳೆದ ಹದಿನೈದು ವರ್ಷಗಳಿಂದ ರಿಕ್ಷಾ ಚಾಲಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ದೀಪ ಶ್ರೀಮತಿ ರೂಪಾ ಹಾಗೂ ಶ್ರೀಮತಿ ಸುಲೋಚನಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೂರ್ವ ವಲಯ ಉಪಾಧ್ಯಕ್ಷರಾದ ಜೆ ಸಿ ನಾಗೇಶ್ ನಾವಡರವರು ಉಪಸ್ಥಿತರಿದ್ದು ಸನ್ಮಾನಿತರ ವೃತ್ತಿಪರತೆಯನ್ನು ಶ್ಲಾಘಿಸಿದರು.ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಪುರಸಭೆಯ ಸದಸ್ಯರಾದ ಶ್ರೀಮತಿ ದೇವಕಿ ಸಣ್ಣಯ್ಯರವರು ಸನ್ಮಾನಿತರಿಗೆ ಶುಭ ಹಾರೈಸಿ ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ತಮ್ಮ ಸೇವೆ ಇನ್ನಷ್ಟು ಉತ್ತಮವಾಗಿ ಲಭಿಸಲಿ ಎಂದು ಹೇಳಿದರು.
ಸನ್ಮಾನಿತರ ಪರಿಚಯವನ್ನು ಜೆಸಿ ಡಾಕ್ಟರ್ ಸೋನಿ ಡಿಕೋಸ್ತರವರು ಮಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಘಟಕದ ಅಧ್ಯಕ್ಷ ಜೆ ಸಿ ಅಭಿಲಾಷ್ ಬಿ ಎ ರವರು ವಹಿಸಿದ್ದರು .
ಲೇಡಿ ಜೆಸಿ ಸಂಯೋಜಕಿಯಾದ ಜೇಸಿ ರೇಖಾ ಕೆ ಯು ರವರು ಗಣ್ಯರನ್ನು ಸ್ವಾಗತಿಸಿದರು .
ಕಾರ್ಯಕ್ರಮದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ಜೆಸಿ ರಾಘವೇಂದ್ರ ಚರಣ್ ನಾವಡ,ಜೇಸಿ ಪ್ರಶಾಂತ್ ಹವಾಲ್ದಾರ, ಜೇಸಿ ವಿಜಯ ಭಂಡಾರಿ, ಪದಾಧಿಕಾರಿಗಳಾದ ಜೆಸಿ ಪ್ರೇಮಾ,ಜೆಸಿ ಸರೋಜಾ,ಜೇಸಿ ರಾಘವೇಂದ್ರ ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ಲೋನಾ ಲೆವಿಸ್ ರವರು ವಂದಿಸಿದರು
.