ಮಹಿಳಾ ದಿನಾಚರಣೆ ಅಂಗವಾಗಿ ಜೇಸಿಐ ಸಿಟಿ ವತಿಯಿಂದ ಆರೋಗ್ಯಂ ಅಸ್ತು ಕಾರ್ಯಕ್ರಮದಡಿಯಲ್ಲಿ ಎಚ್.ಎಮ್ಎಮ್ ಶಾಲೆಯಲ್ಲಿ ಆರೋಗ್ಯ ತಪಾಸಣೆ

JANANUDI.COM NETWORK

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜೇಸಿಐ ಕುಂದಾಪುರ ಸಿಟಿ ಘಟಕದವತಿಯಿಂದ ಆರೋಗ್ಯಂ ಅಸ್ತು ಎಂಬ ಕಾರ್ಯಕ್ರಮದಡಿಯಲ್ಲಿ ಕುಂದಾಪುರದ ಎಚ್.ಎಂ ಎಮ್ ಆಂಗ್ಲಾ ಮಾಧ್ಯಮ ಶಾಲೆಯ ಬೋಧಕೇತರ ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 35 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳು ಈ ಆರೋಗ್ಯ ತಪಾಸಣೆ ಕಾರ್ಯಕ್ರಮದ
ಪ್ರಯೋಜನ ಪಡೆದರು.

ಆರೋಗ್ಯ ತಪಾಸಣೆ ವೈದ್ಯಾಧಿಕಾರಿಯಾಗಿ ನಗರದ ಆಯುಷ್‌ ಧಾಮ್ ಆಸ್ಪತ್ರೆಯ ವೈದ್ಯರಾದ ಡಾಕ್ಟರ್‌ ಸೋನಿ ಡಿಕೋಸ್ಟ ತಮ್ಮ ಸಿಬ್ಬಂದ್ದಿಗಳೊಡನೆ ಸೇರಿ ಆರೋಗ್ಯ ತಪಾಸಣೆ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ಜೆ ಸಿ ಅಭಿಲಾಷ್‌ ಬಿ ಎ, ನಿಕಟಪೂರ್ವ ಅಧ್ಯಕ್ಷರಾದ ಜೆ ಸಿ ವಿಜಯ ಭಂಡಾರಿ ,ಲೇಡಿ ಜೆಸಿ ಸಂಯೋಜಕರಾದ ಜೇಸಿ ರೇಖಾ ಕೆ ಯು, ,ಕಾರ್ಯದರ್ಶಿ ಜೇಸಿ ಲೋನಾ ಲೂವಿಸ್, ಜೇಸಿ ಅಬ್ದುಲ್‌ ಸುಹೇಲ್‌,ಜೇಸಿ ಸ್ಯಾಮ್ಯುಯೆಲ್ಸ್‌, ಜೇಸಿ ವಿನೋದ್‌ ಬೆರೆಟ್ಟೋ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಶುಭ ಮತ್ತು ಇತರರು ಉಪಸ್ಥಿತರಿದ್ದರು.