ಕ್ರಿಕೆಟ್ ದಂತಕತೆ,ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ನಿಧನ

JANANUDI.COM NETWORK


ಕ್ರಿಕೆಟ್ ಲೋಕದ ದಂತಕತೆ, ಪ್ರಖ್ಯಾತ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾದ ಶೇನ್ ವಾರ್ನ್ ನಿಧನ ಹೊಂದಿದ್ದಾರೆ
ಅವರು 52 ವಯಸ್ಸಿನ ಶೇನ್ ವಾರ್ನ್ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ. ಲಭ್ಯವಿರುವ ಮಾಹಿತಿ ಪ್ರಕಾರ ಶೇನ್ ವಾರ್ನ್ ತಮ್ಮ ವಿಲ್ಲಾದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲದೆ ನಿಸ್ತೇಜವಾಗಿದ್ದಂತೆ ಕಂಡುಬಂದಿದ್ದು, ಅವರನ್ನು ತಕ್ಷಣವೇ ಅವರ ವೈದ್ಯಕೀಯ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನ ಮಾಡಿದ್ದಾರೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.
ಅವರ ನಿಧನವನ್ನು ವೈದ್ಯರು ಖಚಿತಪಡಿಸಿದ್ದು, ಅವರ ಕುಟುಂಬವು ಹೆಚ್ಚಿನ ವಿವರಗಳನ್ನು ಮಾಧ್ಯಮಗಳಿಗೆ ನೀಡುವ ನಿರೀಕ್ಷೆಯಿದೆ.‌

ಶೇನ್ ವಾರ್ನ್ ಕ್ರಿಕೆಟಿನ ದಂತಕಥೆಯಾಗಿದ್ದರು. ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದು ಖ್ಯಾತಿ ಪಡೆದಿದ್ದರು. ಹದಿನೈದು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಇಲ್ಲಿಯವರೆಗೂ ಅವರು 708 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದಾರೆ. ವಿಶ್ವದ ಎರಡನೇಯ ಮತ್ತು ಆಸ್ಟ್ರೇಲಿಯಾದ ಆಟಗಾರರ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಇವರ ಹೆಸರಿನಲ್ಲಿದೆ.‌ ಸದ್ಯ ಶೇನ್ ವಾರ್ನ್ ಅವರ ನಿಧನದಿಂದ ಇಡೀ ಕ್ರೀಡಾ ಲೋಕವೇ ಶೋಕದಲ್ಲಿ ಮುಳುಗಿದೆ.