ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ನಂದಳಿಕೆ ಆನಂದ ಪೂಜಾರಿ ಅವರಿಗೆ ಸನ್ಮಾನ

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಆದಿತ್ಯವಾರ ಜರಗಿದ “ಪಂಚಮಿ” ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರಾದ ನಂದಳಿಕೆ ಆನಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಸಂಘದ ಅಂತರಿಕ ಲೆಕ್ಕಪರಿಶೋಧಕರಾದ ಅಬ್ಬನಡ್ಕ ಹರಿಪ್ರಸಾದ್ ಆಚಾರ್ಯ, ಉಪಾಧ್ಯಕ್ಷ ಸುರೇಶ್ ಅಬ್ಬನಡ್ಕ, ಜೊತೆ ಕಾರ್ಯದರ್ಶಿ ಪುಷ್ಪ ಕುಲಾಲ್, ಕೋಶಾಧಿಕಾರಿ ವೀಣಾ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಕಾರ್ಯದರ್ಶಿ ಹರಿಣಾಕ್ಷಿ ನಂದೀಶ್, ವನದುರ್ಗಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಸದಸ್ಯರಾದ ಹರೀಶ್ ಪೂಜಾರಿ, ಸುದರ್ಶನ್ ಕುಂದರ್, ಕಿರಣ್ ಶೆಟ್ಟಿ, ಕೀರ್ತನ್ ಕುಮಾರ್, ಪ್ರಶಾಂತ್ ಬೋಳ, ಪದ್ಮಶ್ರೀ ಪೂಜಾರಿ, ಅಶ್ವಿನಿ ಪ್ರಭಾಕರ್ ಮೊದಲಾದವರು ವೇದಿಕೆಯಲ್ಲಿದ್ದರು.
ಸಂಘದ ಪೂವಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಸ್ವಾಗತಿಸಿದರು. ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸುರೇಶ್ ಕಾಸ್ರಬೈಲು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ವಂದಿಸಿದರು.