ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ

JANANUDI.COM NETWORK

ಮೂಡುಬೆಳ್ಳೆ: ಜ.26: ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ 73 ನೇ ಕಾರ್ಯಕ್ರಮವನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆವಿದ್ಯಾರ್ಥಿ ಎಡ್ವರ್ಡ್ ಡಿ ಅಲ್ಮೇಡಾ ಮತ್ತು ಅವರ ಪತ್ನಿ ಶ್ರೀಮತಿ ಕಾನ್ಸೆಪ್ಟಾ ಡಿ ಅಲ್ಮೇಡಾ ಅವರು ಭಾಗವಹಿಸಿ ಧ್ವಜಾರೋಹಣ ನಡೆಸಿ ಸಂದೇಶವನ್ನು ನೀಡಿದರು.

ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಶ್ರೀ ಜಾನ್ ಕ್ಯಾಸ್ಟಲಿನೊ ಅವರು ಸ್ವಾಗತಿಸಿ ಹಿಂದಿ ಶಿಕ್ಷಕರಾದ ಹೆರಾಲ್ಡ್ ಡಿಸೋಜಾ ವಂದನಾರ್ಪಣೆಗೈದರು ಕನ್ನಡ ಶಿಕ್ಷಕ ಸುಧೀರ್ ನಿರೂಪಿಸಿದರು. ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.