ಪಾದಚಾರಿಗಳಿಗೂ ದಂಡ ಹಾಕಲು ತಯಾರಿ! ನಿಯಮ ತರಲು ಸಿದ್ಧತೆ!

JANANUDI.COM NETWORK

ಬೆಂಗಳೂರು, ಜ. 24: ಸಂಚಾರಿ ಪೊಲೀಸ್ ಇಲಾಖೆ ವಾಹನ ಸವಾರರಿಗೆ, ಅಲ್ಲದೆ ,ಪಾದಾಚಾರಿಗಳಿಗೂ ದಂಡ ವಿಧಿಸುವ ಬಗ್ಗೆ ನೂತನ ನಿಯಮ ತರಲು ಹೊರಟಿರುವುದು, ಮಾಧ್ಯಮದಿಂದ ತಿಳಿದು ಬಂದಿದೆ.

ನಿಗದಿತ ಸ್ಥಳಗಳಲ್ಲಿ ಮಾತ್ರ ರಸ್ತೆಯನ್ನು ದಾಟಬೇಕು. ಜೀಬ್ರಾ ಕ್ರಾಸ್​ ಹೊರತುಪಡಿಸಿ ಬೇರೆ ಕಡೆ ರಸ್ತೆ ದಾಟಿದರೆ, ಅಂತಹವರಿಗೆ ದಂಡ ವಿಧಿಸಲು ಸಂಚಾರಿ ಪೊಲೀಸ್​ ಇಲಾಖೆ ಮುಂದಾಗಿದ್ದು ಇದಕ್ಕೆ ತಯಾರಿ ನಡೆಯುತ್ತದೆ.
ಈ ನಿಯಮ ಈಗಾಗಲೇ ಹೊರ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಇದು ಜನರ ಸುರಕ್ಷತೆಯ ದ್ರಷ್ಟಿಯಿಂದ ಮಾಡಿದನಂತಹ ನಿಯಮ. ನಿಯಮ ಭಾಹಿರವಾಗಿ ನಡೆದು ರಸ್ತೆ ದಾಟಿ, ಹಲವಾರು ದಂಡ ವಿಧಿಸಿಕೊಂಡಿದ್ದಾರೆ, ಹಾಗೆ ಹಲವಾರು ಜೀವ ಕಳೆದುಕೊಂಡಿದ್ದಾರೆ.
ಭಾರತದಲ್ಲಿ ಹಲವಾರು ಅಡ್ಡಾದಿಡ್ಡಿ ರಸ್ತೆ ದಾಟಿ ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ ರಸ್ತೆ ದಾಟುವಾಗ 69 ಜನ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ.

Prepare to penalize pedestrians! Preparing to bring the rule!

Bangalore, j. 24: The Police Department has come up with a new law to impose penalties on motorists, as well as pedestrians, according to media reports.

The road should only be crossed at designated places. If the road crosses the road other than the zebra cross, the traffic police department is preparing to penalize them.
This rule is already prevalent in outer countries. It is a rule made by the safety of the people. The rule has been heavy, crossing the road, imposing several fines and losing many lives.
Many have crossed the road and lost their lives in India. According to the department, 69 people died in road crossings in Karnataka last year.