ಕೋಲಾರ ಜಿಲ್ಲಾ ಕಾಂಗ್ರೆಸ್‌ನಿಂದ ಪುನೀತ್ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ , ತಮ್ಮ ನಟನೆ , ಸಜ್ಜನಿಕೆ , ಹೃದಯವಂತಿಕೆಯ ಮೂಲಕ ಕರ್ನಾಟಕದ ಜನರ ಹೃದಯ ಗೆದ್ದಿದ್ದ ಪವರ್ ಸ್ಟಾರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು . ನ ಕನ್ನಡ ನಾಡು , ನುಡಿಗೆ ರಾಜ್‌ಕುಮಾರ್‌ ಅವರ ಕುಟುಂಬ ನೀಡಿರುವ ಕೊಡುಗೆ ಅಪಾರ , ಅದರಲ್ಲೂ ಪುನೀತ್ ರಾಜ್‌ಕುಮಾರ್‌ ಅವರ ಸಮಾಜಮುಖಿ ಕಾರ್ಯಗಳು ಅವರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ , ಕನ್ನಡ ನಾಡು ಇಂದು ಓರ್ವ ಧೀಮಂತ ನಟನನ್ನು ಕಳೆದುಕೊಂಡು ದುಃಖಿಸುತ್ತಿದೆ ಎಂದರು .
ಈ ಸಂದರ್ಭದಲ್ಲಿ ಮುಖಂಡರಾದ ಇಟ್ಬಾಲ್ ಅಹಮದ್‌ , ಊರುಬಾಗಿಲು ಶ್ರೀನಿವಾಸ್ , ಕೆಪಿಸಿಸಿ ಸದಸ್ಯ ಕುಮಾರ್‌ , ಮುಖಂಡರಾದ ಪ್ರಸಾದ್‌ಬಾಬು , ಗಂಗಮ್ಮನಪಾಳ್ಯ ರಾಮಯ್ಯ ಲಾಲ್‌ಬಹುದ್ದೂರು ಶಾಸ್ತ್ರಿ , ವೆಂಕಟಪತಿ , ಬಾಬು ಸೇರಿದಂತೆ ಹಲವಾರು ಮಂದಿ ಹಾಜರಿದ್ದರು .