ನೂತನ ತಂತ್ರಜ್ಞಾನದ ಬ್ರೇಕ್ ಡಿಸ್ಕ್ ಫೇಸಿಂಗ್ ಮತ್ತು ಡ್ರಮ್ ಬೋರಿಂಗ್ ಮೇಷಿನರಿ ಉದ್ಘಾಟನೆ.

JANANUDI.COM NETWORK

ಕುಂದಾಪುರ, ಸೆ. 17: ಇಂದು ಕ್ರಾಸ್ಟೊ ಸನ್ಸ್ ಸಂಸ್ಥೆಯಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಬ್ರೇಕ್ ಡಿಸ್ಕ್ ಫೇಸಿಂಗ್ ಮತ್ತು ಡ್ರಮ್ ಬೋರಿಂಗ್ ಮೇಷಿನರಿಯನ್ನು ದುರ್ಗಾಂಬಾ ಮೋಟಾರ್ಸ್ ಸಂಸ್ಥೆಯ ಮಾಲಕರಾದ ಸದಾನಂದ ಚಾತ್ರಾರವರು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉಡುಪಿ ಜಿಲ್ಲೆಯಲ್ಲೆ ಮೊಟ್ಟ ಮೊದಲ ಭಾರಿಗೆ ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಹನಗಳ ಇಂಜಿನ್ ರೀ-ಕಂಡೀಷನ್ ಮಾಡಲು ಅಗತ್ಯವಾದ ಎಲ್ಲಾ ಯಂತ್ರಗಳನ್ನು ಹೊಂದಿದ ಸಂಸ್ಥೆಯು ಕ್ರಾಸ್ಟೋ ಇಂಜಿನಿಯರಿಂಗ್ ವರ್ಕ್ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕರಾದ ವಿವಿಯನ್ ಕ್ರಾಸ್ಟೋ, ಲಿಯೋನಿಲ್ಲಾ ಕ್ರಾಸ್ಟೋ, ವಿನೋದ್ ಕ್ರಾಸ್ಟೋ, ಸಂಸ್ಥೆಯ ಸಿಬ್ಬಂದಿಗಳು , ಗ್ರಾಹಕರು ಮತ್ತು ವಾಹನ ಮಾಲೀಕರು ಉಪಸ್ಥಿತರಿದ್ದರು
.