ಮುಂಬೈ ಮಹಿಳೆಯ ಮೇಲೆ ಅತ್ಯಾಚಾರ, ಪೈಸಾಚಿಕ ಕ್ರತ್ಯದಿಂದ ಮಹಿಳೆ ಸ್ಥಿತಿ ಗಂಭೀರ

JANANUDI.COM NETWORK


ಮುಂಬೈ: ಮುಂಬೈನಲ್ಲಿ ನಡೆದ ಅನಾಗರಿಕ ರೀತಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ವೆಸಗಿದ್ದು, ಅತ್ಯಾಚರದ, ಸಮಯದಲ್ಲಿ ಆರೋಪಿ ಪೈಸಾಚಿಕವಾಗಿ ವರ್ತಿಸಿ, ಮಹಿಳೆಯ ಖಾಸಗಿ ಭಾಗಗಳಲ್ಲಿ ಕಬ್ಬಿಣದ ರಾಡ್ ಅನ್ನು ತುರುಕಿಸಿದ್ದರಿಂದ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಮುಂಬೈನ ಸಾಕಿ ನಾಕಾ ಪ್ರದೇಶದಲ್ಲಿ ಈ ಪೈಸಾಚಿಕ ಕ್ರತ್ಯ ನಡೆದಿದೆ. ಈ ಮಹಿಳೆ 30 ರ ಆಸುಪಾಸಿನ ಮಹಿಳೆಯೆಂದು ತಿಳಿದು ಬಂದಿದೆ. ಈ ಅಪರಾಧ ಕ್ರತ್ಯದಲ್ಲಿ ಒಂದಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಶಂಕಿಸಿರುವ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
. ಡಿಸಿಪಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ