ಗಂಗೊಳ್ಳಿ: 625 ಅಂಕ ಗಳಿಸಿದ ಶ್ರೇಯಾಳಿಗೆ ಸಮ್ಮಾನಿಸಿದ ಡಿಡಿಪಿಐ

JANANUDI.COM NETWORK

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ : ದಿನಾಂಕ 27 8 20 21 ರಂದು ಉಡುಪಿ ಜಿಲ್ಲಾ ಸನ್ಮಾನ್ಯ ಉಪ ನಿರ್ದೇಶಕರಾದ ಎನ್.ಎಚ್ ನಾಗೂರ ಭೇಟಿ ನೀಡಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ಶ್ರೇಯಾ ಮೇಸ್ತ ಮತ್ತು ಅವಳಿ ಸಹೋದರ ಸಂಜಯ್ ಮೇಸ್ತ ಇವರಿಗೆ ಸನ್ಮಾನಿಸಿ ಸನ್ಮಾನಿಸಿ ಶುಭಹಾರೈಸಿದರು ಈ ಸಂದರ್ಭದಲ್ಲಿ ಕುಂದಾಪುರ ವಲಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಯುತ ಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ ಭಗಿನಿ ಶುಭ ಎಸಿ, ಶಿಕ್ಷಣ ಸಂಯೋಜಕರಾದ ಶ್ರೀ ಸಂತೋಷ್ ಕುಮಾರ್, ಜಂಟಿ ಕಾರ್ಯದರ್ಶಿ ಭಗಿನಿ ಜ್ಯೋತಿ, ಮುಖ್ಯಶಿಕ್ಷಕಿ ಭಗಿನಿ ಕ್ರೇಸೆನ್ಸ್, ವಿದ್ಯಾರ್ಥಿಗಳ ತಾಯಿ ಶ್ರೀಮತಿ ಪವಿತ್ರ ಮತ್ತು ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು