ಗಂಗೊಳ್ಳಿ ಅಮ್ರತಾ ಮಹಾ ಸಂಘದ ವತಿಯಿಂದ 625/625 ಅಂಕ ಗಳಿಸಿದ ಶ್ರೇಯಾ ಮೇಸ್ತಾಗೆ ಸನ್ಮಾನ

JANANUDI.COM NETWORK

ಗಂಗೊಳ್ಳಿ: 2020–21 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625/625 ಅಂಕಗಳಿಸಿದ ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಮೇಸ್ತಾ ಅವರನ್ನು ಕೊಸೆಸಾಂವ್ ದೇವಾಲಯದ ಅಮ್ರತಾ ಮಹಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ದೇವಾಲಯದ ಧರ್ಮ ಗುರು ಫಾ/ ರೋಶನ್ ಡಿ ಸೋಜರವರು ಸನ್ಮಾನಿಸಿ ಶುಭವನ್ನು ಕೋರಿದರು. ಈ ಸಂದರ್ಭದಲ್ಲಿ ಉತ್ತಮ ಅಂಕವನ್ನು ಪಡೆದ ಶ್ರೇಯಾಳ ಅವಳಿ ಸಹೋದರ ಸಂಜಯ ಮೇಸ್ತ, ಶ್ರೇಯಾ ಳ ತಾಯಿ ಪವಿತ್ರ ಮೇಸ್ತ, ಶಾಲೆಯ ಮುಖ್ಯೋಪಧ್ಯಾಯಿನಿ ಸಿಸ್ಟರ್ ಕ್ರೆಸೆನ್ಸಾ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ನಿವ್ರತ್ತಿ ಶಿಕ್ಷಕಿ ಫ್ಲೊಸಿ ಬ್ರಗಾಂಜ ರವರು ಅಬಿನಂದಿಸಿದರು. ಸಂಘದ ಸಚೇತಕಿ ಸಿಸ್ಟರ್ ಜ್ಯೋತಿ, ಸಂಘದ ಅಧ್ಯಕ್ಷೆ ಆಶಾ ರೆಬೆರೊ, ಸಂಘದ ಪ್ರೇರಕಿ ಸಿಂತಿಯಾ ರೊಡ್ರಿಗಸ್, ಆಯೋಗದ ಸಂಯೋಜಕಿ ಪ್ರೀತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.