ಬೀಜಾಡಿಯಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ

JANANUDI.COM NETWORK


ಬೀಜಾಡಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಸಾರಥ್ಯದಲ್ಲಿ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೀಜಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನೇಶನ್ ಶಿಬಿರ ಶನಿವಾರ ಬೀಜಾಡಿ ಮೂಡು ಶಾಲಾ ವಠಾರದಲ್ಲಿ ಜರುಗಿತು.
ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೆಬ್ಬಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಪೂಜಾರಿ, ಚಂದ್ರ ಬಿ.ಎನ್, ಮಂಜುನಾಥ್ ಕುಂದರ್, ವಿಶ್ವನಾಥ, ಅನಿಲ್ ಚಾತ್ರಬೆಟ್ಟು, ಬೀಜಾಡಿ ಮೂಡುಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಯಶಸ್ವಿಗೆ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಾದ ಅಶ್ವಿನಿ, ಪೂರ್ಣಿಮಾ, ಜ್ಯೋತಿ, ನರ್ಸೀಂಗ್ ವಿದ್ಯಾರ್ಥಿಗಳಾದ ನಯನಾ, ರಮ್ಯಾ, ಆಶಾ ಕಾರ್ಯಕರ್ತೆಯರಾದ ಸರೋಜಾ, ನಾಗರತ್ನ, ಚೇತನಾ, ನಾಗಶ್ರೀ, ಗೀತಾ, ಅನಿತಾ, ನೇತ್ರಾವತಿ, ಶೋಭಾ, ಸುವಾಸಿನಿ,ಬೀಜಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನಾರಾಯಣ, ಮಿತ್ರ ಸಂಗಮದ ಸದಸ್ಯರಾದ ರಾಜೇಶ್ ಆಚಾರ್ಯ, ಬಿ.ಜಿ ನಾಗರಾಜ, ನಾಗರಾಜ ಬೀಜಾಡಿ, ವಿನಯ ಹೆಬ್ಬಾರ್, ವಿವೇಕ್ ಹೆಬ್ಬಾರ್, ಪ್ರದೀಪ್ ದೇವಾಡಿಗ, ಗಜೇಂದ್ರ,ರಾಜೇಶ್ ಆಚಾರ್ಯ ಗೋಪಾಡಿ,ನಾರಾಯಣ ಭಂಡಾರಿ, ಹರ್ಷ ಗಾಣಿಗ, ಪ್ರಸನ್ನ ಗೋಳಿಬೆಟ್ಟು ಮೊದಲಾದವರು ಸಹಕರಿಸಿದರು.