ಸ್ಟೆಲ್ಲಾ ಮಾರಿಸ್ : 625 ರಲ್ಲಿ 625 ಅಂಕ ಪಡೆದು ಶ್ರೇಯಸ್ಸಿನ ಉತ್ತುಂಗಕ್ಕೇರಿದ ಶ್ರೇಯಾ

JANANUDI.COM NETWORK


ಗಂಗೊಳ್ಳಿ, ಅ.10: 2020 ರ ಸಾಲೀನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಕು.ಶ್ರೇಯಾ ಮೇಸ್ತಾ, 625 ರಲ್ಲಿ 625 ಅಂಕ ಪಡೆದು ಗಂಗೊಳ್ಳಿಯ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆ ಗೈದಿದ್ದಾಳೆ.
ಅವಳನ್ನು ಅಗೋಸ್ತ್ 10 ರಂದು ಶಾಲಾ ವತಿಯಿಂದ ಅವಳ ಮನೆಗೆ ತೆರಳಿ ಅವಳನ್ನು ಸನ್ಮಾನಿಸಲಾಯಿತು. ಶ್ರೇಯಾಳ ಜೊತೆ ಹುಟ್ಟಿದ (ಅವಳಿ ಜವಳಿ) ಸಂಜಯ್ ಮೇಸ್ತಾ ಕೂಡ ಶಾಲೆಗೆ ದ್ವಿತೀಯ ಸ್ಥಾನ ಪಡೆದದ್ದು, ಇವನನ್ನು ಅಭಿನಂದಿಸಲಾಯಿತು. ಇವರು ಗುಜ್ಜಾಡಿ ಬೆಣ್ಕೆರೆಯ ಪುರುಷೋತ್ತಮ್ ಮತ್ತು ಪವಿತ್ರ ಮೇಸ್ತ ಇವರ ಪುತ್ರಿಯಾಗಿದ್ದಾರೆ. ಸನ್ಮಾನದ ವೇಳೆ ಇವರು ಹಾಜರಿದ್ದರು. ಶಾಲಾಡಳಿತ ಜಂಟಿ ಕಾರ್ಯದರ್ಶಿ ಭಗಿನಿ ಜ್ಯೋತಿ ಎ.ಸಿ. ಶುಭಾಶಯದ ಮಾತುಗಳನ್ನಾಡಿ ಅಭಿನಂದಿಸಿದರು. ವಲಯ ಸಂಪನ್ಮೂಲ ವ್ಯಕ್ತಿ ಸೌರ್ಪಣಿಕ ಮುಖ್ಯ ಶಿಕ್ಷಕಿ ಭಗಿನಿ ಕ್ರೆಸೆನ್ಸ್, ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.