ಖ್ಯಾತ ನಟಿ ವಿನ್ನಿ ಫೆರ್ನಾಂಡಿಸ್ ನಿಧನ

JANANUDI.COM NETWORK

ಮಂಗಳೂರು:ಜು.30: ಬಹುಭಾಷಾ ನಟಿ ವಿನ್ನಿ ಫೆರ್ನಾಂಡಿಸ್(63) ಜುಲೈ 29 ರಂದು  ಹೃದಯಘಾತದಿಂದ ನಿಧನರಾಗಿದ್ದಾರೆ.

   ಅವರು ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರ ನಟಿಸಿದ್ದ ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಇವರ ಕಲಾ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಮೃತರು ಪತಿ ವಿನ್ಸೆಂಟ್, ಮತ್ತು ಮಕ್ಕಳಾದ ಪ್ರತಾಪ್ ಮತ್ತು ಬಬಿತಾ ಇವರನ್ನು ಅಗಲಿದ್ದಾರೆ.