ಬಾರಿ ವಾಗ್ವಾದ ಮಾಡಿಕೊಂಡಿದ್ದ ಮೈಸೂರಿನ ಇಬ್ಬರೂ ಲೇಡಿಸ್ IAS ಅಧಿಕಾರಿಗಳ ಎತ್ತಂಗಡಿ!

JANANUDI.COM NETWORK

ಬೆಂಗಳೂರು: ಕಳೆದ ಹಲವು ದಿನಗಳಿಂದ ಮುಂದುವರೆಯುತ್ತಿದ್ದ ಮೈಸೂರು ಇಬ್ಬರ ಐಎಎಸ್ ಅಧಿಕಾರಿಗಳ ಜಟಾಪಟಿ ಮೈಸೂರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿತ್ತು. ಇದೀಗ ರಾಜ್ಯ ಸರ್ಕಾರ ಇವರ ಜಗಳಕ್ಕೆ ಮಂಗಳ ಹಾಡಿದೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಇಬ್ಬರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

       ಕೋವಿಡ್ ನಿರ್ವಹಣೆ ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವೆ ಜಟಾಪಟಿ ಏರ್ಪಟ್ಟಿತ್ತು, ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ಕೂಡ ನೀಡಿತ್ತು. ಆದರೂ ಇಬ್ಬರ ವಾಗ್ವಾದ ಮತ್ತು ರಾಜಕಾರಣಿಗಳ ಹೇಳಿಕೆ ನಡೆಯುತ್ತಲೆಇತ್ತು

     ಇದೀಗ ಇಬ್ಬರೂ ಅಧಿಕಾರಿಗಳು ವರ್ಗಾವಣೆ ರಾಜ್ಯ ಸರ್ಕಾರ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ. ಮೈಸೂರು ಡಿಸಿಯಾಗಿದ್ದ ರೋಹಣಿ ಸಿಂಧೂರಿ ಅವರನ್ನು ಅವರು ಈ ಹಿಂದೆ ಸೇವೆ ನೀಡುತಿದ್ದ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು ಅವರ ಬದಲಿಗೆ ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಗೌತಮ್ ಬಗಾದಿ ಅವರನ್ನು ನೇಮಕ ಮಾಡಲಾಗಿದೆ.

      ಅಂತೆಯೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾನಾಗ್ ರನ್ನು ಆರ್ ಡಿಪಿಆರ್ ಇ ಆಯುಕ್ತರಾಗಿ ನೇಮಕ ಮಾಡಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಲಕ್ಷ್ನೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ರೋಹಿಣಿ ಸಿಂಧೂರಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭೇಟಿ ಮಾಡಿ ವರ್ಗಾವಣೆ ಹಿಂದಕ್ಕೆ ಪಡೆಯಬೇಕೆಂದು ವಿನಂತಿಸಿದ್ದು, ಇದನ್ನು ಮುಖ್ಯಮಂತ್ರಿ ಒಪ್ಪಲಿಲ್ಲವೆಂದು ತಿಳಿದು ಬಂದಿದೆ