JANANUDI.COM NETWORK
ಉತ್ತರಪ್ರದೇಶ: ಮದುವೆಯಾ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು,ಹಾರವನ್ನು ಬದಲಾಯಿಸಿದ್ದರು, ಇನ್ನೇನು ತಾಳಿ ಕಟ್ಟೋದಷ್ಟೇ ಬಾಕಿ ಇತ್ತು. ಅಷ್ಟರಲ್ಲೆ ಹೃದಯಾಘಾತವಾಗಿ ನವ ವಧು ಸಾವನ್ನಪ್ಪಿರುವ ಹ್ರದಯ ವಿದ್ರಾವಹಕ ಘಟನೆ ಉತ್ತರಪ್ರದೇಶದ ಲಖ್ನೊನಲ್ಲಿ ಈ ಘಟನೆ ನಡೆದಿದೆ.
ಆದರೆ ಮದುವೆ ಮಾತ್ರ ನಿಂತಿಲ್ಲ. ಅಕ್ಕನ ಬದಲಿಗೆ ತಂಗಿಯನ್ನೆ ವರನಿಗೆ ಕೊಟ್ಟು ವದುವಿನ ಕಡೆಯವರು ಮದುವೆ ನೆಡೆಸೀಯೆ ಬಿಟ್ಟಿದ್ದಾರೆ. ಸುರಭಿ ಎಂಬ ಹುಡುಗಿಗೂ ಮತ್ತು ಮಂಜೇಶ ಎಂಬ ಹುಡುಗನಿಗೂ ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯ ಹಿಂದಿನ ರಾತ್ರಿಯೇ ವರನ ದಿಬ್ಬಣ ವಧುವಿನ ಮನೆಗೆ ತೆರಳಿದ್ದಾರೆ. ಶಾಸ್ತ್ರಗಳನ್ನೆಲ್ಲಾ ಮಾಡಲಾಗಿತ್ತು.
ಗಂಡು-ಹೆಣ್ಣು ಹಾರವನ್ನು ಬದಲಾಯಿಸಿಕೊಂಡಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಕುಸಿದು ಬಿದ್ದಿದ್ದಾಳೆ. ತಕ್ಷಣ ಮನೆಯವರು ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನತದೃಷ್ಟ ಹುಡುಗಿ ಹೃದಯಾಘಾತದಿಂದ ವಿಧಿವಶಗಳಾಗಿದ್ದಾಳೆ.
ಶವವನ್ನ ಮನೆಗೆ ತಂದ ಕುಟುಂಬಸ್ಥರು, ನಂತರ ಮನೆಮಂದಿ,ಮಾತುಕತೆ ನಡೆಸಿ ವರ ಎಲ್ಲರು ಒಪ್ಪಿದ ಬಳಕ ಆ ವರನಿಗೆ ಮೃತ ಹುಡುಗಿಯ ತಂಗಿಯನ್ನೇ ಕೊಟ್ಟು ಮದುವೆ ಮಾಡಿದ್ದಾರೆ.