JANANUDI.COM NETWORK
ಮೈಸೂರು : ಕೊರೋನಾದಿಂದ ಮ್ರತ ಪಟ್ಟ ಒರ್ವ ದುರ್ಧೈವಿಯ ತಂದೆಯ ಶವ ನನಗೆ ಬೇಡ, ಆ ಹೆಣವನ್ನು ನೀವೆ ಅಂತ್ಯಕ್ರಿಯೆ ಮಾಡಿ,. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ಹೇಳಿದ್ದಾನೆ. ಬಳಿಕ ಆತನು ತಂದೆಯ ಶವ ಕೂಡ ನೋಡಲು ಬಾರದಿರುವ ಘಟನೆ ಮೈಸೂರಲ್ಲಿ ನಡೆದಿದೆ.
ನಗರದ ಹೆಬ್ಬಾಳದ ’ಸೂರ್ಯ’ ಎಂಬ ಬೇಕರಿ ಬಳಿಯ ಮನೆಯೊಂದರಲ್ಲಿ ವೃದ್ಧ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಈ ಬಗ್ಗೆ ಎನೋ ಮನಸ್ತಾಪಗಳಿಂದ ತಂದೆಯಿಂದ ದೂರ ಇದ್ದ ಈ ಮಗ ನಿಜಕ್ಕೂಕಠೋರ ಮನಸಿನವನು, ಇಂತಹನ ಮಗ ಪಡೆದ ತಂದೆ ನಿಜಕ್ಕೂ ದುರ್ಧೈವಿಯ ಸಮಾಜದಲ್ಲಿ ಎಂತಂತಹ ಘಾತಕ ಮನಸಿನ ಜನರಿದ್ದಾರೆಂದು ಆಶ್ಚರ್ಯವಾಗುತ್ತದೆ.
ಇಂತಹ ಅಯೋಗ್ಯ ಪುತ್ರ ಮಹಾಶಯ ವಿರ್ಧಾಧ್ಯಕ್ಷಿಣವಾಗಿ ’ನನ್ನ ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ, ಅವರ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ಎಲ್ಲ ದಾಖಲೆಗಳನ್ನು ತಂದು ಕೊಟ್ಟು ಬಿಡಿ, ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ’ಎಂದು ವಿಳಾಸ ಕೂಡ ತಿಳಿಸಿದ್ದಾನೆ.