ಮಧ್ಯಪ್ರದೇಶ ನಡುರಸ್ತೆಯಲ್ಲಿ ಮಾಸ್ಕ್ ಹಾಕದ ಮಹಿಳೆಯ ಜಡೆ ಹಿಡಿದು ಎಳೆದಾಡಿದ ಪೊಲೀಸರು.

JANANUDI.COM NETWORK

ಮಧ್ಯಪ್ರದೇಶ,ಮೇ. 20: ಮಾಸ್ಕ್ ಹಾಕದ ಮಹಿಳೆಯನ್ನು ಪೊಲೀಸರು ನಡುರಸ್ತೆಯಲ್ಲಿ ಎಳೆದಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಲಾಕ್ ಡೌನ್ ವೇಳೆ ಅವಶ್ಯಕ ವಸ್ತುಗಳನ್ನು ತರಲು ತಾಯಿ ಮಗಳ ಜೊತೆ ಅಂಗಡಿಗೆ ತೆರಳುತ್ತಿದ್ದಳು. ಈ ವೇಳೆ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಆಕೆಯ ಮೇಲೆ ಕೈ ಮಾಡಿ ಎಳೆದಾಡಿದ್ದಾರೆ. ಪುರುಷ ಪೊಲೀಸರು ಕೂಡ ಮಹಿಳೆಯನ್ನು ಎಳೆದಾಡಿದ್ದಾರೆ. ಮಹಿಳಾ ಪೇದೆ ಆಕೆಯ ಜಡೆಯನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ.
ಮಹಿಳೆಯ ಮೇಲೆ ಪೊಲೀಸರು ದೌರ್ಜನ್ಯ ನಡೆಸುವ ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ. ,

ಪೊಲೀಸ್ ವಾಹನದಲ್ಲಿ ಮಹಿಳೆಯನ್ನು ಹತ್ತುವಂತೆ ಪೊಲೀಸರು ಎಳೆದಾಡುವಾಗ ಹಲ್ಲೆ ಕೂಡಾ ಮಾಡಿದ್ದಾರೆ
ಕೋವಿಡ್ ಬಗ್ಗೆ ಜಾಗೃತಿ ಮೂಡಿಸಬೇಕಾದ ಪೊಲೀಸರೆ ಈ ರೀತಿ ದರ್ಪವನ್ನು ಮೆರೆದಿದ್ದು, ಒಳ್ಳೆಯ ನಡತೆಯ
ಪೊಲೀಸರಿಗೆ ಮಸಿ ಬಳೆದಂತಾಗಿದೆ